ಜೋಹಾನ್ಸ್ಬರ್ಗ್: ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡೇಲ್ ಸ್ಟೇಯ್ನ್ ಮಂಗಳವಾರ ಕ್ರಿಕೆಟ್ ನ ಎಲ್ಲ ಮಾದರಿಗಳಿಂದ ನಿವೃತ್ತಿ ಘೋಷಿಸಿದರು.

ಕ್ರಿಕೆಟ್ ಕ್ಷೇತ್ರದ ದಿಗ್ಗಜ ವೇಗಿಗಳಲ್ಲಿ ಡೇಲ್ ಸ್ಟೇಯ್ನ್ ಕೂಡ ಒಬ್ಬರು. ತಮ್ಮ ಬಿರುಗಾಳಿ ವೇಗದ ಎಸೆತಗಳ ಮೂಲಕ ಬಹುತೇಕ ಎಲ್ಲ ತಂಡಗಳ ಆಟಗಾರರಿಗೂ ಸಿಂಹಸ್ವಪ್ನರಾಗಿದ್ದರು. ಲೈನ್ ಮತ್ತು ಲೆಂಗ್ತ್ ಹಾಗೂ ಸ್ವಿಂಗ್ ಬೌಲಿಂಗ್ನಲ್ಲಿ ಡೇಲ್ ಸಿದ್ಧಹಸ್ತರು.

38 ವರ್ಷದ ಸ್ಟೇಯ್ನ್ ಇಂಡಿಯನ್ ಪ್ರೀಮಿಯರ್ ಲೀ್ಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಲಯನ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳಲ್ಲಿಯೂ ಆಡಿದ್ದಾರೆ.

ಸ್ಟೇಯ್ನ್ 2019ರಲ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಇದೀಗ ಸೀಮಿತ ಓವರ್ಗಳ ಕ್ರಿಕೆಟ್ಗೂ ವಿದಾಯ ಘೋಷಿಸಿದ್ದಾರೆ.

‘ಸ್ಟೇಯ್ನ್ ಮಹಾನ್ ವ್ಯಕ್ತಿ ಮತ್ತು ಬೌಲರ್. ಬೆಂಕಿಯಂತಹ ಎಸೆತಗಳನ್ನು ಹಾಕುತ್ತಿದ್ದ ಅವರು ನಾನು ನೋಡಿದ ಕೆಲವೇ ಕೆಲವು ಶ್ರೇಷ್ಠರಲ್ಲಿ ಒಬ್ಬರು’ ಎಂದು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

‘ನನ್ನ ಅತ್ಯಂತ ನೆಚ್ಚಿನ ಆಟಗಾರ ಡೇಲ್ ಸ್ಟೇಯ್ನ್ ಅವರಿಗೆ ನಿವೃತ್ತಿ ಜೀವನ ಸಂತಸ ತರಲಿ’ ಎಂದು ಭಾರತದ ಹಾರ್ದಿಕ್ ಪಾಂಡ್ಯ ಶುಭ ಹಾರೈಸಿದ್ದಾರೆ.

ಇಂಗ್ಲೆಂಡ್ನ ಕೆವಿನ್ ಪೀಟರ್ಸನ್, ಮೈಕೆಲ್ ವಾನ್, ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್, ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್, ಶ್ರೀಲಂಕಾ ತಂಡದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರು ಡೇಲ್ ಅವರಿಗೆ ಶುಭ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.