ಜೊಹಾನ್ಸ್ಬರ್ಗ್ (ಎಎಫ್ಪಿ): ಕ್ರಿಕೆಟ್ ಜಗತ್ತಿನ ಶ್ರೇಷ್ಠ ವೇಗದ ಬೌಲರ್ಗಳಲ್ಲಿ ಒಬ್ಬರಾದ ದಕ್ಷಿಣ ಆಫ್ರಿಕದ ಡೇಲ್ ಸ್ಟೇನ್ ಸೋಮವಾರ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದರು. ಸೀಮಿತ ಓವರುಗಳ ಪಂದ್ಯದಲ್ಲಿ ಹೆಚ್ಚು ಕಾಲ ಆಡುವ ಉದ್ದೇಶದಿಂದ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.

2004ರಲ್ಲಿ ಇಂಗ್ಲೆಂಡ್ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟಿದ್ದ ಸ್ಟೇನ್, ಕಳೆದ ಫೆಬ್ರುವರಿಯಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದರು. ‘ನನ್ನ ನೆಚ್ಚಿನ ಮಾದರಿಯ ಕ್ರಿಕೆಟ್ನಿಂದ ಹೊರನಡೆಯುತ್ತಿದ್ದೇನೆ’ ಎಂದು 36 ವರ್ಷದ ಬೌಲರ್ ತಿಳಿಸಿದರು.

ಸ್ಟೇನ್ ಟೆಸ್ಟ್ ಪಂದ್ಯಗಳಲ್ಲಿ 439 ವಿಕೆಟ್ಗಳನ್ನು ಪಡೆದಿದ್ದಾರೆ. ಇದು ದಕ್ಷಿಣ ಆಫ್ರಿಕದ ಬೌಲರ್ ಒಬ್ಬರ ಅತ್ಯಧಿಕ ಗಳಿಕೆ.

ಭುಜದ ಗಾಯದಿಂದಾಗಿ ಅವರು ಇಂಗ್ಲೆಂಡ್ನಲ್ಲಿ ಜೂನ್–ಜುಲೈನಲ್ಲಿ ನಡೆದ ವಿಶ್ವಕಪ್ನಲ್ಲಿ ಆಡಿರಲಿಲ್ಲ. ಇದೇ ಸಮಸ್ಯೆಯಿಂದ ಅವರಿಗೆ ಕಳೆದ ಮೂರು ವರ್ಷಗಳಲ್ಲಿ ಎಂಟು ಟೆಸ್ಟ್ ಮಾತ್ರ ಆಡಲು ಸಾಧ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.