ಲಂಡನ್: ಸೌತಾಂಪ್ಟನ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದ ಬಳಿಕ ಬಿಡುವಾದ ಭಾರತ ತಂಡದ ಆಟಗಾರರು ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ.

ಟೀಮ್ ಇಂಡಿಯಾ ತಂಡವು ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಸರಣಿ ಆಡಲಿದೆ. ಈಗಾಗಲೇ ಇಂಗ್ಲೆಂಡ್ನಲ್ಲಿರುವ ಉಪನಾಯಕ ಅಜಿಂಕ್ಯಾ ರೆಹಾನೆ ಮತ್ತು ರೋಹಿತ್ ಶರ್ಮಾ ಹೆಂಡತಿ ಮಕ್ಕಳ ಜೊತೆ ಕಳೆದ ಮಧುರ ಕ್ಷಣಗಳ ಫೋಟೊವನ್ನು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿ ಸಂಭ್ರಮಿಸಿದ್ದಾರೆ.

ರಹಾನೆ ಸೋಮವಾರ ಪತ್ನಿ ರಾಧಿಕಾ ಧೋಪಾವ್ಕರ್ ಮತ್ತು ಮಗಳು ಆರ್ಯಾ ಜೊತೆಗಿನ ಫೋಟೊವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು. ಚಿತ್ರದಲ್ಲಿ ರೋಹಿತ್ ಶರ್ಮಾ, ಪತ್ನಿ ರಿತಿಕಾ ಸಜ್ದೇಹ್ ಹಾಗೂ ಮಗಳು ಸಮೈರಾ ಜೊತೆಗಿದ್ದುದು ವಿಶೇಷವಾಗಿತ್ತು.

ಅಕ್ಟೋಬರ್ 17ರಿಂದ ಟಿ20 ವಿಶ್ವಕಪ್: ಐಸಿಸಿ ಪ್ರಕಟಣೆ

ನೆಚ್ಚಿನ ಆಟಗಾರರ ಸುಂದರ ಕುಟುಂಬವನ್ನು ಕಣ್ತುಂಬಿಕೊಂಡ ಅಭಿಮಾನಿಗಳು ಲೈಕ್ಗಳ ಸುರಿಮಳೆ ಸುರಿಸಿದ್ದಾರೆ. ಸದ್ಯ ಟೀಮ್ ಇಂಡಿಯಾಗೆ 3 ವಾರಗಳ ಬಿಡುವಿದೆ. ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಸರಣಿ ಆರಂಭಗೊಳ್ಳಲಿದೆ.

ಜೂನ್ 23ರಂದು ನ್ಯೂಜಿಲೆಂಡ್ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ವಿರಾಟ್ ಕೋಹ್ಲಿ ನೇತೃತ್ವದ ಟೀಮ್ ಇಂಡಿಯಾ ಸೋತಿತ್ತು. 2013ರಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಇಂಗ್ಲೆಂಡ್ ವಿರುದ್ಧ ಚಾಂಪಿಯನ್ ಟ್ರೋಫಿ ಗೆದ್ದ ಬಳಿಕ ಒಂದೇ ಒಂದು ಐಸಿಸಿ ಕಪ್ ಗೆದ್ದಿಲ್ಲ. 2014ರ ಟಿ20 ವಿಶ್ವಕಪ್, 2017ರ ಐಸಿಸಿ ಚಾಂಪಿಯನ್ಷಿಪ್ ಮತ್ತು 2021ರ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ ಪಂದ್ಯದಲ್ಲಿ ಭಾರತ ತಂಡ ಮುಗ್ಗರಿಸಿದೆ. 2015ರ ವಿಶ್ವಕಪ್ನಲ್ಲಿ, 2016ರ ಟಿ20 ವಿಶ್ವಕಪ್ನಲ್ಲಿ ಮತ್ತು 2019ರ ವಿಶ್ವಕಪ್ನಲ್ಲಿ ಸೆಮಿ-ಫೈನಲ್ ತಲುಪಿದ್ದೇ ಸಾಧನೆಯಾಗಿದೆ.

ಇಂಗ್ಲೆಂಡ್ ಪ್ರವಾಸಕ್ಕೆ 2 ದಿನ ಮುನ್ನ ಪಾಕ್ ಕೋಚ್ ಯೂನಿಸ್ ಖಾನ್ ರಾಜೀನಾಮೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.