ರಾಜ್ಕೋಟ್: ವೇಗದ ಬೌಲರ್ ಜಯದೇವ ಉನದ್ಕತ್ ಅವರು ಮುಂದಿನ ತಿಂಗಳಲ್ಲಿ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸೌರಾಷ್ಟ್ರ ತಂಡವನ್ನು ಮುನ್ನಡೆಸಲಿದ್ದಾರೆ. 20 ಸದಸ್ಯರ ತಂಡವನ್ನು ಆಯ್ಕೆ ಸಮಿತಿ ಶುಕ್ರವಾರ ಪ್ರಕಟಿಸಿದೆ.

ರಣಜಿ ಟೂರ್ನಿಯ ಹಾಲಿ ಚಾಂಪಿಯನ್ ಆಗಿರುವ ಸೌರಾಷ್ಟ್ರ ತಂಡದಲ್ಲಿ ಪ್ರೇರಕ್ ಮಂಕಡ್, ಚಿರಾಗ್ ಜಾನಿ, ಎಡಗೈ ಬ್ಯಾಟ್ಸ್ಮನ್ ಅರ್ಪಿತ್ ವಾಡವಾಡ, ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಹರ್ವಿಕ್ ದೇಸಾಯಿ ಮುಂತಾದವರೂ ಇದ್ದಾರೆ. ಬೌಲಿಂಗ್ ವಿಭಾಗದದಲ್ಲಿ ಉನದ್ಕತ್ ಅವರೊಂದಿಗೆ ಚೇತನ್ ಸಕಾರಿಯ ಮತ್ತು ಎಡಗೈ ಸ್ಪಿನ್ನರ್ ಧರ್ಮೇಂದ್ರ ಜಡೇಜ ಇದ್ದಾರೆ. ಜನವರಿ 10ರಂದು ಆರಂಭವಾಗಲಿರುವ ಟೂರ್ನಿಯಲ್ಲಿ ಸೌರಾಷ್ಟ್ರ ಎಲೀಟ್ ‘ಡಿ’ ಗುಂಪಿನಲ್ಲಿ ಸ್ಥಾನ ಗಳಿಸಿದ್ದು ಸರ್ವಿಸಸ್, ಗೋವಾ, ಮಧ್ಯಪ್ರದೇಶ ಮತ್ತು ರಾಜಸ್ತಾನ ತಂಡಗಳೂ ಇದೇ ಗುಂಪಿನಲ್ಲಿವೆ. ಲೀಗ್ ಪಂದ್ಯಗಳು ಇಂದೋರ್ನಲ್ಲಿ ನಡೆಯಲಿವೆ.

ತಂಡ: ಜಯದೇವ ಉನದ್ಕತ್ (ನಾಯಕ), ಚಿರಾಗ್ ಜಾನಿ, ಧರ್ಮೇಂದ್ರಸಿಂಗ್ ಜಡೇಜ, ಅವಿ ಬಾರೋಟ್, ಹರ್ವಿಕ್ ದೇಸಾಯಿ, ಅರ್ಪಿತ್ ವಾಸವಡಾ, ಸಮರ್ಥ್ ವ್ಯಾಸ್, ವಿಶ್ವರಾಜ್ ಸಿನ್ಹ ಜಡೇಜ, ಚೇತನ್ ಸಕರಿಯಾ, ಪ್ರೇರಕ್ ಮಂಕಡ್, ದಿವ್ಯರಾಜ್ ಸಿನ್ಹ ಚೌಹಾಣ್, ವಂದಿತ್ ಜೀವರಾಜನಿ, ಪಾರ್ಥ್ ಭುಟ್, ಅಗ್ನಿವೇಶ್ ಅಯಾಚಿ, ಕುನಾಲ್ ಕರಮಚಾಂದನಿ, ಯುವರಾಜ್ ಚೂಡಾಸಮಾ, ಹಿಮಾಲಯ್ ಬಾರದ್, ಕುಶಾಂಗ್ ಪಟೇಲ್, ದೇವಾಂಗ್ ಕರಾಮ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.