ನವದೆಹಲಿ: ನಿಧಾನಗತಿಯ ಪಿಚ್ ಸಿದ್ಧಪಡಿಸುವುದು ತಪ್ಪಲ್ಲ. ಆದರೆ ಐಪಿಎಲ್ನ ಮೊದಲ ಪಂದ್ಯ ನಡೆದ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಂಥ ಪಿಚ್ ಸಿದ್ಧಪಡಿಸುವಾಗ ಎಚ್ಚರವಾಗಿರಬೇಕು ಎಂದು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಆಟಗಾರ ರಾಬಿನ್ ಉತ್ತಪ್ಪ ಹೇಳಿದರು.

ಚೆನ್ನೈನಲ್ಲಿ ನಡೆದಿದ್ದ ಉದ್ಘಾಟನಾ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ 70 ರನ್ಗಳಿಗೆ ಆಲೌಟ್ ಆಗಿತ್ತು. ಸುಲಭ ಗುರಿ ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಪ್ರಯಾಸದಿಂದ ಗೆದ್ದಿತ್ತು.

ಈ ಬಗ್ಗೆ ಮಾತನಾಡಿದ ಉತ್ತಪ್ಪ ‘ಐಪಿಎಲ್ ಟೂರ್ನಿಯಲ್ಲಿ ರನ್ಗಳು ಹರಿದು ಬರಲು ಪ್ರೇಕ್ಷಕರು ಇಷ್ಟಪಡುತ್ತಾರೆ. ಇದಕ್ಕೆ ನಿಧಾನಗತಿಯ ಪಿಚ್ಗಳು ಮಾರಕ’ ಎಂದರು.

‘ಟ್ವೆಂಟಿ–20 ಕ್ರಿಕೆಟ್ ಮನರಂಜನೆ ಅಲ್ಲ. ಆದರೂ ಅಲ್ಲಿ ಪ್ರೇಕ್ಷಕರ ದೃಷ್ಟಿಯಿಂದ ನೋಡಬೇಕಾದ ಅಗತ್ಯವಿದೆ. ಬ್ಯಾಟ್ಸ್ಮನ್ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸುವುದನ್ನು ನೋಡಲು ಅವರು ಅಲ್ಲಿಗೆ ಬರುತ್ತಾರೆ. ಫಿರೋಜ್ ಷಾ ಕೋಟ್ಲಾ ಅಂಗಣದ ಪಿಚ್ ಕೂಡ ನಿಧಾನಗತಿಯದ್ದಾಗಿದ್ದು ಬ್ಯಾಟ್ಸ್ಮನ್ಗಳು ರನ್ ಗಳಿಸಲು ಪರದಾಡಬೇಕಾಗುತ್ತದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.