ಸೆಂಚೂರಿಯನ್ (ದಕ್ಷಿಣ ಆಫ್ರಿಕಾ):ದಕ್ಷಿಣ ಆಫ್ರಿಕಾದ ಬೌಲಿಂಗ್ ಆಲ್ರೌಂಡರ್‌ವೆರ್ನಾನ್ ಫಿಲ್ಯಾಂಡರ್ ಅವರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವುದಾಗಿ ತಿಳಿಸಿದ್ದಾರೆ. 34 ವರ್ಷ ವಯಸ್ಸಿನ ಫಿಲ್ಯಾಂಡರ್ ತಮ್ಮ 12 ವರ್ಷಗಳ ವೃತ್ತಿ ಬದುಕಿನಲ್ಲಿ ಇದುವರೆಗೆ ಒಟ್ಟು 60 ಟೆಸ್ಟ್, 30 ಏಕದಿನ ಹಾಗೂ 7 ಟಿ20 ಪಂದ್ಯಗಳನ್ನು ಆಡಿದ್ದಾರೆ.

ನಿವೃತ್ತಿ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿರುವ ಫಿಲ್ಯಾಂಡರ್,‘ಅಮೋಘವಾದ ಪಯಣವನ್ನು ಮುಕ್ತಾಯಗೊಳಿಸಲು ಇದು ಸೂಕ್ತ ಸಮಯ ಎಂದು ಭಾವಿಸಿದ್ದೇನೆ.ಈ ಪಯಣದ ಏರಿಳಿತಗಳಲ್ಲಿ ನನಗೆ ಸ್ಫೂರ್ತಿ ತುಂಬಿದ ನನ್ನ ಹೆಂಡತಿ, ಕುಟುಂಬ, ಸ್ನೇಹಿತರಿಗೆ ವಿಶೇಷ ಕೃತಕ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ. ನಾನು ಕ್ರಿಕೆಟ್ ಆರಂಭಿಸಿದ ದಿನದಿಂದಲೂ ನನ್ನ ನಂ.1 ಅಭಿಮಾನಿಯಾಗಿರುವ ಅಮ್ಮನಿಗೂ ಧನ್ಯವಾದಗಳು’ ಎಂದಿದ್ದಾರೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಹಾಗೂ ಆಡಳಿತ ವರ್ಗಕ್ಕೂ ಧನ್ಯವಾದ ಹೇಳಿರುವ ಫೀಲ್ಯಾಂಡರ್,‘ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ತಂಡಕ್ಕೆ ಗೆಲುವು ತಂದುಕೊಡುವ ಸಲುವಾಗಿ ನನ್ನ ಸಂಪೂರ್ಣ ಗಮನ ಹಾಗೂ ಸಾಮರ್ಥ್ಯವನ್ನ ಕೇಂದ್ರೀಕರಿಸಿದ್ದೇನೆ’ ಎಂದೂ ತಿಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 50 ವಿಕೆಟ್ ಕಬಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಫಿಲ್ಯಾಂಡರ್ ಕೇವಲ 7ನೇ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ್ದರು.ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಕ್ರಮವಾಗಿ216, 41 ಮತ್ತು 4 ವಿಕೆಟ್ ಉರುಳಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಸರಣಿ ಡಿ.26 ರಿಂದಸೆಂಚೂರಿಯನ್‌ನಲ್ಲಿ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.