ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ನೂತನ ಮೈಲಿಗಲ್ಲಿನ ಸನಿಹದಲ್ಲಿದ್ದಾರೆ.

ಅಬುಧಾಬಿಯಲ್ಲಿ ಸೋಮವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಕಣಕ್ಕಿಳಿಯಲಿರುವ ವಿರಾಟ್, ಆರ್ಸಿಬಿ ಪರ 200 ಪಂದ್ಯಗಳನ್ನು ಆಡಿದ ಗೌರವಕ್ಕೆ ಭಾಜನರಾಗಲಿದ್ದಾರೆ.

ಇದನ್ನೂ ಓದಿ:KKR vs RCB: ವಿರಾಟ್ ಬಳಗದ ಮೇಲೆ ಕಣ್ಣು

200ನೇ ಪಂದ್ಯ ಆಡುತ್ತಿರುವ ವಿರಾಟ್ ಅವರಿಗೆ ಆರ್ಸಿಬಿ ವಿಶೇಷ ವಿಡಿಯೊವನ್ನು ಹಂಚಿದೆ. ಆರ್ಸಿಬಿ ನಿರ್ದೇಶಕ ಹಾಗೂ ಮುಖ್ಯ ಕೋಚ್ ಮೈಕ್ ಹೆಸನ್, ಸಹ ಆಟಗಾರ ಎಬಿ ಡಿ ವಿಲಿಯರ್ಸ್ ಸೇರಿದಂತೆ ಆರ್ಸಿಬಿ ತಂಡದ ಆಟಗಾರರು ಶುಭ ಹಾರೈಸಿದ್ದಾರೆ.

ವಿರಾಟ್ ಕೊಹ್ಲಿ 'ದಿಗ್ಗಜ ಆಟಗಾರ' ಎಂದು ಎಬಿ ಡಿ ವಿಲಿಯರ್ಸ್ ಬಣ್ಣಿಸಿದ್ದಾರೆ.

2008ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ವಿರಾಟ್ ಚೊಚ್ಚಲ ಪಂದ್ಯವನ್ನಾಡಿದ್ದರು. ಅಲ್ಲಿಂದ ಬಳಿಕ ಆರ್ಸಿಬಿ ನಾಯಕರಾದರೂ ಇದುವರೆಗೆ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಆರ್ಸಿಬಿ ಪರ ಮೂರು ಬಾರಿ ರನ್ನರ್-ಅಪ್ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪ್ರಸಕ್ತ ಸಾಲಿನ ಐಪಿಎಲ್ ಬಳಿಕ ಆರ್ಸಿಬಿ ನಾಯಕತ್ವ ತೊರೆಯುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದರು. ಇದು ಅಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡಿದೆ.

ವಿರಾಟ್ ಕೊಹ್ಲಿ ಐಪಿಎಲ್ ದಾಖಲೆ ಇಂತಿದೆ:
ಪಂದ್ಯ: 199
ಇನ್ನಿಂಗ್ಸ್: 191
ಅಜೇಯ: 31
ರನ್: 6,076
ಗರಿಷ್ಠ: 113
ಬ್ಯಾಟಿಂಗ್ ಸರಾಸರಿ: 37.97
ಸ್ಟ್ರೇಕ್ರೇಟ್: 130.41
ಶತಕ: 5
ಅರ್ಧಶತಕ: 40
ಬೌಂಡರಿ: 524
ಸಿಕ್ಸರ್: 205
ವಿಕೆಟ್: 4
ಶ್ರೇಷ್ಠ ಬೌಲಿಂಗ್: 2/25
ಕ್ಯಾಚ್: 80

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.