ಕ್ರಿಕೆಟ್ ಅನ್ನು ಜಗತ್ತಿಗೆ ಪರಿಚಯಿಸಿದ ಇಂಗ್ಲೆಂಡ್ ಪಾಲಿಗೆ 2019 ಅವಿಸ್ಮರಣೀಯ. ಬರೋಬ್ಬರಿ 11 ವಿಶ್ವಕಪ್ ಟೂರ್ನಿಗಳಲ್ಲಿ ನಿರಾಸೆ ಅನುಭವಿಸಿದ್ದ ಆಂಗ್ಲರು ಪ್ರಶಸ್ತಿಯ ಬರ ನೀಗಿಸಿಕೊಂಡಿದ್ದು ಈ ವರ್ಷವೇ.

ಇಂಗ್ಲೆಂಡ್‌ಗೆವಿಶ್ವಕಪ್ ಗೆದ್ದುಕೊಟ್ಟಬೆನ್ ಸ್ಟೋಕ್ಸ್,ಟೆಸ್ಟ್‌ನಲ್ಲಿ ಸಾವಿರ ರನ್‌ಗಳಿಸಿದ ಮಾರ್ನಸ್ ಲಾಬುಶೇನ್, ವಿಶ್ವಕಪ್‌ನಲ್ಲಿ ಐದು ಶತಕ ಸಿಡಿಸಿದ ರೋಹಿತ್ ಶರ್ಮಾ, ನಿಷೇಧ ಮುಗಿಸಿ ಬಂದ ಸ್ಟೀವ್ ಸ್ಮಿತ್–ಡೇವಿಡ್ ವಾರ್ನರ್, ವೇಗವಾಗಿ ಎರಡು ದ್ವಿಶತಕ ಸಿಡಿಸಿ ಬ್ರಾಡ್ಮನ್ ದಾಖಲೆ ಮುರಿದ ಮಯಂಕ್ ಅಗರವಾಲ್ ಹೀಗೆ ಹಲವು ಆಟಗಾರರು ಮಿಂಚಿದ ವರ್ಷವಿದು.

ಅಂತೆಯೇ ಈ ವರ್ಷ ಕ್ರಿಕೆಟ್‌ಗೆ ವಿದಾಯ ಹೇಳಿದವರ ಪಟ್ಟಿಯೂ ಚಿಕ್ಕದೇನಲ್ಲ. ದಶಕಗಳ ಕಾಲ ಅಭಿಮಾನಿಗಳನ್ನು ರಂಜಿಸಿದ್ದ ಡೇಲ್ ಸ್ಟೇಯ್ನ್, ಜೋಹಾನ್ ಬೋತಾ, ನುವಾನ್ ಕುಲಶೇಕರ, ಜೆಪಿ ಡುಮಿನಿ, ಇಮ್ರಾನ್ ತಾಹಿರ್, ಶೋಯಬ್ ಮಲಿಕ್, ವೇಣುಗೋಪಾಲ್ ರಾವ್, ಮೊಹಮದ್ ಆಮಿರ್, ಅಜಂತ ಮೆಂಡಿಸ್ ಸೇರಿ ಇನ್ನೂ ಹಲವರು ಹಿನ್ನಲೆಗೆ ಸರಿದರು.

ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ತಂಡವು 2007ರಲ್ಲಿ ಟಿ20 ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಯುವರಾಜ್ ಸಿಂಗ್, ಏಕದಿನ ಕ್ರಿಕೆಟ್ ರನ್ ಗಳಿಕೆಯಲ್ಲಿ ಹಲವು ದಾಖಲೆಗಳನ್ನು ಬರೆದಿರುವ ಹಾಶೀಂ ಆಮ್ಲಾ, ಮೂರು ಬಾರಿ ವಿಶ್ವಕಪ್ ಗೆದ್ದಇಂಗ್ಲೆಂಡ್‌ಮಹಿಳಾ ತಂಡದಲ್ಲಿ ಆಡಿದ್ದಸಾರಾ ಟೇಲರ್ ಮತ್ತು ಲಂಕಾ ತಂಡಕ್ಕೆ 2014ರಲ್ಲಿ ಟಿ20 ವಿಶ್ವಕಪ್ ಗೆದ್ದುಕೊಟ್ಟಿದ್ದ ಲಸಿತ್ ಮಾಲಿಂಗ ವಿದಾಯ ಹೇಳಿದ್ದೂ ಇದೇ ವರ್ಷ.

ಯುವರಾಜ್ ಸಿಂಗ್
ಅಭಿಮಾನಿಗಳ ಪ್ರೀತಿಯ ಸಿಕ್ಸರ್ ಸಿಂಗ್ ಯುವರಾಜ್ ಸಿಂಗ್ ವಿಶ್ವ ಕ್ರಿಕೆಟ್ ಕಂಡ ಪ್ರಮುಖ ಆಲ್ರೌಂಡರ್‌ಗಳಲ್ಲಿ ಒಬ್ಬರು. 19ವರ್ಷದೊಳಗಿನವರ ವಿಶ್ವಕಪ್, ಟಿ20 ಮತ್ತು ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆದ್ದ ತಂಡದಲ್ಲಿದ್ದ ಏಕೈಕ ಭಾರತೀಯ ಎಂಬ ಶ್ರೇಯ ಹೊಂದಿರುವ ಯುವಿ ಇದೇ ವರ್ಷ ಜೂನ್ 10ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

2011ರ ವಿಶ್ವಕಪ್ ನಂತರಕ್ಯಾನ್ಸರ್‌ಗೆ ತುತ್ತಾಗಿದ್ದರು. ಬಳಿಕ ಗುಣಮುಖರಾಗಿ ಮತ್ತೆ ಕ್ರಿಕೆಟ್‌ಗೆ ಮರಳಿದ್ದರು.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 40 ಟೆಸ್ಟ್ ಪಂದ್ಯ, 304 ಏಕದಿನ, 58 ಟಿ20 ಪಂದ್ಯಗಳನ್ನಾಡಿರುವ ಯುವಿ, ಟೆಸ್ಟ್‌ನಲ್ಲಿ 33.93 ಸರಾಸರಿಯೊಂದಿಗೆ 1900 ರನ್ ಗಳಿಸಿದ್ದಾರೆ. ಇದರಲ್ಲಿ 3 ಶತಕ ಮತ್ತು 11 ಅರ್ಧ ಶತಕ ಬಾರಿಸಿದ್ದಾರೆ.

ಏಕದಿನ ಪಂದ್ಯಗಳಲ್ಲಿ 36.55 ಸರಾಸರಿಯೊಂದಿಗೆ 8701 ರನ್ (14 ಶತಕ, 52 ಅರ್ಧಶತಕ) ಕಲೆಹಾಕಿದ್ದಾರೆ. ಟಿ20ಯಲ್ಲಿ 28.02 ಸರಾಸರಿಯೊಂದಿಗೆ 1,177 ರನ್ ಗಳಿಸಿದ್ದಾರೆ.

ಟೆಸ್ಟ್, ಏಕದಿನ ಹಾಗೂ ಟಿ20ಯಲ್ಲಿ ಕ್ರಮವಾಗಿ 9, ಏಕದಿನದಲ್ಲಿ 111, 28 ವಿಕೆಟ್ ಉರುಳಿಸಿರುವ ಈ ಆಲ್ರೌಂಡರ್, ಮುರೂ ಮಾದರಿಗಳಲ್ಲಿ ಕ್ರಮವಾಗಿ 31, 94 ಮತ್ತು 12 ಕ್ಯಾಚ್ ಪಡೆದಿದ್ದಾರೆ.

ಲಸಿತ್ ಮಾಲಿಂಗ
ಏಕದಿನ ಕ್ರಿಕೆಟ್‌ನಲ್ಲಿ ಮೂರು ಬಾರಿ ಹ್ಯಾಟ್ರಿಕ್ ಗಳಿಸಿದ ವಿಶ್ವದ ಏಕೈಕ ಬೌಲರ್ ಯಾರು...? ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಎರಡು ಹ್ಯಾಟ್ರಿಕ್ ಸಾಧನೆ ಮಾಡಿರುವ ಒಬ್ಬನೇ ಒಬ್ಬ ಬೌಲರ್ ಯಾರು...? ಏಕದಿನ ಮಾದರಿಯಲ್ಲಿ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್ ಬೀಳಿಸಿದ ಬೌಲರ್ ಯಾರಾದರೂ ಇದ್ದಾರೆಯೇ...? ಇಂಥ ಇನ್ನೂ ಅನೇಕ ಪ್ರಶ್ನೆಗಳಿಗೆ ಉತ್ತರ ಒಂದೇ-ಶ್ರೀಲಂಕಾದ ಲಸಿತ್ ಮಾಲಿಂಗ.

ತನ್ನವಿಶಿಷ್ಟ ಬೌಲಿಂಗ್ ಶೈಲಿ, ಬಣ್ಣಬಣ್ಣದ ಕೂದಲಿನ ಮೂಲಕ ಕ್ರಿಕೆಟ್ ಅಂಗಣವನ್ನು ರಂಗಾಗಿಸಿದ್ದ ಮಾಲಿಂಗ ಏಕದಿನ ಕ್ರಿಕೆಟ್‌ಗೆ ಕಳೆದ ಆಗಸ್ಟ್‌ನಲ್ಲಿ ವಿದಾಯ ಹೇಳಿದರು. ಈ ವರ್ಷಅಕ್ಟೋಬರ್‌ನಲ್ಲಿ ನಡೆಯುವ ವಿಶ್ವ ಟ್ವೆಂಟಿ–20 ಕ್ರಿಕೆಟ್ ಟೂರ್ನಿ ಬಳಿಕ ಟಿ20 ಕ್ರಿಕೆಟ್‌ಗೂ ವಿದಾಯ ಹೇಳಲಿದ್ದಾರೆ.

2014ರ ಟ್ವೆಂಟಿ-20 ವಿಶ್ವಕಪ್ ಪ್ರಶಸ್ತಿ ಗೆದ್ದ ಲಂಕಾ ತಂಡವನ್ನು ಮುನ್ನಡೆಸಿದ್ದ ಮಾಲಿಂಗ, 2007 ಮತ್ತು 2011ರ ವಿಶ್ವಕಪ್ ಟೂರ್ನಿಗಳಲ್ಲಿ ಫೈನಲ್ ಪ್ರವೇಶಿಸಿದ ತಂಡದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.30 ಟೆಸ್ಟ್ ಪಂದ್ಯಗಳಿಂದ101 ವಿಕೆಟ್ ಮತ್ತು 226 ಏಕದಿನ ಪಂದ್ಯಗಳಿಂದ 338 ವಿಕೆಟ್‌ಗಳನ್ನು ಕಬಳಿಸಿದ್ದಾರೆ.79 ಟಿ20 ಪಂದ್ಯಗಳನ್ನೂ ಆಡಿರುವ ವೇಗಿ 108 ವಿಕೆಟ್ ಉರುಳಿಸಿದ್ದಾರೆ.

ಸಾರಾ ಟೇಲರ್
ಉದ್ವೇಗದ ಸಮಸ್ಯೆಯಿಂದ ಬಳಲುತ್ತಿದ್ದ ಇಂಗ್ಲೆಂಡ್ ಮಹಿಳಾ ತಂಡದ ವಿಕೆಟ್ ಕೀಪರ್ ಸಾರಾ ಟೇಲರ್, ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಕಳೆದ ಸೆಪ್ಟೆಂಬರ್‌ನಲ್ಲಿ ನಿವೃತ್ತಿ ಪಡೆದರು.

2006ರಲ್ಲಿ ಇಂಗ್ಲೆಂಡ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ಸಾರಾ, ಮೂರೂ ಮಾದರಿಯಲ್ಲಿ ಒಟ್ಟು 226 ಪಂದ್ಯಗಳನ್ನು ಆಡಿದ್ದಾರೆ. ಅತಿಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ್ತಿರಯರಲ್ಲಿ ಒಬ್ಬರೆನಿಸಿರುವ ಅವರು, ಏಕದಿನ, ಟಿ20 ಹಾಗೂಟೆಸ್ಟ್‌ನಲ್ಲಿ ಕ್ರಮವಾಗಿ 4,056, 2,177 ಮತ್ತು300 ರನ್ ಕಲೆಹಾಕಿದ್ಧಾರೆ.

ಇಂಗ್ಲೆಂಡ್ ತಂಡ 2009ರಲ್ಲಿ ಏಕದಿನ ಮತ್ತು ಟಿ20 ವಿಶ್ವಕಪ್ ಹಾಗೂ 2017ರಲ್ಲಿ ಏಕದಿನ ವಿಶ್ವಕಪ್ ಗೆಲ್ಲಲು ಮಹತ್ವದ ಕೊಡುಗೆ ನೀಡಿದ್ದ ಸಾರಾ,ಮಹಿಳೆಯರ ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ.

ಹಾಶೀಂ ಆಮ್ಲಾ
36 ವರ್ಷದ ಕ್ರಿಕೆಟಿಗ ಹಾಶೀಂ ಆಮ್ಲಾ ಅವರೂ 2019ರ ಆಗಸ್ಟ್‌ನಲ್ಲಿ ವಿದಾಯ ಹೇಳಿದರು. ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ2000, 3000, 4000, 5000, 6000 ಮತ್ತು 7000 ರನ್ ಪೂರೈಸಿದ ಬ್ಯಾಟ್ಸ್‌ಮನ್ ಎನಿಸಿರುವ ಆಮ್ಲಾ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು55 ಶತಕಗಳನ್ನು ಗಳಿಸಿದ್ದಾರೆ.

124 ಟೆಸ್ಟ್‌ಗಳ 215 ಇನಿಂಗ್ಸ್‌ಗಳಿಂದ 28 ಶತಕ,ನಾಲ್ಕು ದ್ವಿಶತಕ ಹಾಗೂ ಒಂದು ತ್ರಿಶತಕ ಸಹಿತ ಒಟ್ಟು 9,282 ರನ್ ಕಲೆ ಹಾಕಿದ್ದಾರೆ. 181 ಏಕದಿನ ಹಾಗೂ 44 ಟಿ20 ಪಂದ್ಯಗಳಲ್ಲಿ ಆಫ್ರಿಕಾ ಪರ ಕಣಕ್ಕಿಳಿದಿರುವ ಅವರು ಕ್ರಮವಾಗಿ 8,113 ಮತ್ತು 1,277 ರನ್ ಪೇರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.