ಬೆಂಗಳೂರು: ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ಕ್ರಿಕೆಟ್ ತಂಡದ ರಣಜಿ ಟ್ರೋಫಿ ಟೂರ್ನಿಯಛಲದ ಅಭಿಯಾನ ಸೋಮವಾರ ಅಂತ್ಯವಾಯಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಸೆಮಿಫೈನಲ್ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ (ಔಟಾಗದೆ 131; 266 ಎಸೆತ, 17 ಬೌಂಡರಿ) ಮತ್ತು ಶೆಲ್ಡನ್ ಜ್ಯಾಕ್ಸನ್ (100; 217ಎಸೆತ, 15 ಬೌಂಡರಿ)ಅವರ ಶತಕಗಳ ಬಲದಿಂದ ಸೌರಾಷ್ಟ್ರವು ಐದು ವಿಕೆಟ್‌ಗಳಿಂದ ಕರ್ನಾಟಕ ತಂಡವನ್ನು ಸೋಲಿಸಿತು.

ಹೋದ ಏಳು ವರ್ಷಗಳಲ್ಲಿ ಮೂರನೇ ಬಾರಿ ಫೈನಲ್ ಪ್ರವೇಶಿಸಿತು. ಕರ್ನಾಟಕ ತಂಡವು ಸತತ ಎರಡನೇ ವರ್ಷ ಸೆಮಿಫೈನಲ್‌ನಲ್ಲಿ ಸೋತಿತು. ಹೋದ ವರ್ಷ ಕೋಲ್ಕತ್ತದಲ್ಲಿ ನಡೆದಿದ್ದ ನಾಲ್ಕರ ಘಟ್ಟದ ಪಂದ್ಯದಲ್ಲಿ ವಿದರ್ಭ ಎದುರು ಮಣಿದಿತ್ತು. ಈ ಸಲದ ಇನ್ನೊಂದು ಸೆಮಿಫೈನಲ್‌ನಲ್ಲಿ ಕೇರಳ ಎದುರು ಗೆದ್ದಿರುವ ವಿದರ್ಭ ಈಗಾಗಲೇ ಫೈನಲ್ ಪ್ರವೇಶಿಸಿದೆ. ಫೆಬ್ರುವರಿ 3ರಂದುನಡೆಯಲಿರುವ ಪಂದ್ಯದಲ್ಲಿ ವಿದರ್ಭ–ಸೌರಾಷ್ಟ್ರ ಮುಖಾಮುಖಿಯಾಗಲಿವೆ.

ಕರ್ನಾಟಕವು ನೀಡಿದ್ದ 279 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸೌರಾಷ್ಟ್ರವು 91.4 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಮುಟ್ಟಿತು. ಶನಿವಾರ ಎರಡನೇಇನಿಂಗ್ಸ್ ಆರಂಭಿಸಿದ್ದ ತಂಡವು 23ರನ್‌ಗಳಿಗೆ ಮೂರು ವಿಕೆಟ್ ಕಳೆದು ಕೊಂಡಿತ್ತು. ನಂತರ ಚೇತೇಶ್ವರ್ ಪೂಜಾರ ಅವರು ನಾಲ್ಕನೇ ವಿಕೆಟ್ಜೊತೆಯಾಟದಲ್ಲಿ ಗಳಿಸಿದ 214 ರನ್‌ಗಳ ನೆರವಿನಿಂದ ಜಯ ಸಾಧಿಸಿತು. ಅಂಪೈರ್ ಖಾಲೀದ್ ಸೈಯದ್ ಭಾನುವಾರನೀಡಿದ್ದ ತಪ್ಪು ತೀರ್ಪಿನಿಂದ ’ಜೀವದಾನ’ಪಡೆದಿದ್ದ ಪೂಜಾರ ಕರ್ನಾಟಕದ ಕನಸನ್ನು ಭಗ್ನಗೊಳಿಸಿದರು.

ನಾಲ್ಕನೇ ದಿನದಾಟದ ಕೊನೆಗೆ ತಂಡವು 74 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 224 ರನ್ ಗಳಿಸಿತ್ತು. 90 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಶೆಲ್ಡನ್ ಸೋಮವಾರ ಬೆಳಿಗ್ಗೆ ಶತಕ ಪೂರೈಸಿಕೊಂಡರು. ನಂತರದ ಎಸೆತದಲ್ಲಿಯೇ ವಿನಯ್ ಬೌಲಿಂಗ್‌ನಲ್ಲಿ ಕ್ಲೀನ್‌ಬೌಲ್ಡ್ ಆದರು. ಮಧ್ಯದ ಸ್ಟಂಪ್ ಉರುಳಿತು. ಆಗ ವಿನಯಕುಮಾರ್ ಅಂಪೈರ್ ಗೆ ಎದುರಾಗಿ ನಿಂತು ಚಪ್ಪಾಳೆ ತಟ್ಟಿದರು. ಕ್ರೀಸ್‌ಗೆ ಬಂದ ಅರ್ಪಿತ್ ವಾಸವದಾ (12 ರನ್) ಅವರು ರೋನಿತ್ ಎಸೆತದಲ್ಲಿ ಹೊಡೆದ ಚೆಂಡನ್ನು ಶಾರ್ಟ್ ಲೆಗ್ ಫೀಲ್ಡರ್ ಕೆ.ವಿ. ಸಿದ್ಧಾರ್ಥ್ ಕ್ಯಾಚ್ ಪಡೆದರು. ಪೂಜಾರ ಜೊತೆಗೂಡಿ ಪ್ರೇರಕ್ ಮಂಕಡ್ ಹೆಚ್ಚು ಅವಸರ ಮಾಡದೇ ತಂಡವನ್ನು ಗೆಲುವಿನ ದಡ ಸೇರಿಸಿದರು.

ಭಾನುವಾರ ಫೀಲ್ಡಿಂಗ್ ಮಾಡುವಾಗಡೈವ್ ಮಾಡಿ ಬೆನ್ನು ಉಳುಕಿಸಿಕೊಂಡಿದ್ದಲೆಗ್‌ಸ್ಪಿನ್ನರ್ ಶ್ರೇಯಸ್ ಗೋಪಾಲ್ ಕಣಕ್ಕಿಳಿಯಲಿಲ್ಲ. ಅವರ ಬದಲಿಗೆ ಜೆ. ಸುಚಿತ್ ಫೀಲ್ಡಿಂಗ್ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.