ವಿಶ್ವಕಪ್... ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಕ್ರಿಕೆಟ್ ಹಬ್ಬವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿರುತ್ತಾರೆ. ವಿಶ್ವ ಶ್ರೇಷ್ಠ ಆಟಗಾರರ ಸಮ್ಮಿಲನಕ್ಕೆ ಸಾಕ್ಷಿಯಾಗುವ ಈ ಟೂರ್ನಿಯು ವಿವಿಧ ದೇಶಗಳು ಮತ್ತು ಆಟಗಾರರ ನಡುವೆ ಸೌಹಾರ್ದ ಸಂಬಂಧ ಬೆಸೆಯಲೂ ನೆರವಾಗಿದೆ.

‘ಕ್ರಿಕೆಟ್ ಜನಕರ ನಾಡು’ ಇಂಗ್ಲೆಂಡ್‌ನಲ್ಲಿ 1975ರಲ್ಲಿ ಶುರುವಾದ ಈ ಟೂರ್ನಿಯು ಹಂತ ಹಂತವಾಗಿ ತನ್ನ ವೈಭವ ಹೆಚ್ಚಿಸಿಕೊಳ್ಳುತ್ತಾ ಸಾಗಿದೆ. ಜನಪ್ರಿಯತೆ ಜಾಸ್ತಿಯಾದಂತೆಲ್ಲಾ ಟೂರ್ನಿಯಲ್ಲಿ ಹಣ ಹೊಳೆಯಾಗಿ ಹರಿಯುತ್ತಿದೆ.

ವೆಸ್ಟ್ ಇಂಡೀಸ್ ತಂಡವು ಚೊಚ್ಚಲ ಪ್ರಶಸ್ತಿ ಗೆದ್ದಿತ್ತು. ಆಗ ಕೆರಿಬಿಯನ್ ನಾಡಿನ ತಂಡಕ್ಕೆ ಸಿಕ್ಕ ಬಹುಮಾನ ₹76 ಸಾವಿರ ಮಾತ್ರ. ಆಗ ರೇಡಿಯೊದಲ್ಲಿ ವೀಕ್ಷಕ ವಿವರಣೆ ಕೇಳಿ ಸಂಭ್ರಮಿಸಿದ್ದವರೇ ಹೆಚ್ಚು. ಟಿ.ವಿ.ಯಲ್ಲಿ ಪಂದ್ಯಗಳು ಪ್ರಸಾರವಾಗಲು ಶುರುವಾದ ನಂತರ ವಿಶ್ವಕಪ್‌ನ ಜನಪ್ರಿಯತೆ ದುಪ್ಪಟ್ಟಾಯಿತು. ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ಬೊಕ್ಕಸಕ್ಕೆ ಹಣವು ಹೊಳೆಯಾಗಿ ಹರಿದು ಬರಲು ಶುರುವಾಯಿತು. ವರ್ಲ್ಡ್ ಟೆಲಿವಿಷನ್ ₹78.66 ಕೋಟಿ ನೀಡಿ 1992ರ ವಿಶ್ವಕಪ್ ಪ್ರಸಾರದ ಹಕ್ಕು ಖರೀದಿಸಿದ್ದು ಇದಕ್ಕೆ ಸಾಕ್ಷಿ. 1999ರ ವೇಳೆಗೆ ಈ ಮೊತ್ತ ₹161 ಕೋಟಿ ತಲುಪಿತ್ತು. ಇದು ಹೀಗೆಯೇ ಮುಂದುವರಿಯಿತು.

2003ರಲ್ಲಿ ಗ್ಲೋಬಲ್ ಕ್ರಿಕೆಟ್ ಕಾರ್ಪೊರೇಷನ್ (ಜಿಸಿಸಿ) ಸಂಸ್ಥೆಯು ಎರಡು ವಿಶ್ವಕಪ್‌ಗಳ (2003 ಮತ್ತು 2007) ಪ್ರಾಯೋಜಕತ್ವ ಪಡೆದಿತ್ತು. ಆ ಒಪ್ಪಂದದ ಅನ್ವಯ ಐಸಿಸಿ ಖಜಾನೆಗೆ ದಾಖಲಾಗಿದ್ದು ಬರೋಬ್ಬರಿ ₹2,530 ಕೋಟಿ. ಇಎಸ್‌ಪಿಎನ್ ಸಂಸ್ಥೆಯು ₹16,400 ಕೋಟಿ ನೀಡಿ 2011ರ ವಿಶ್ವಕಪ್ ಪ್ರಸಾರದ ಹಕ್ಕು ಖರೀದಿಸಿತ್ತು. ಆಗ 220 ದೇಶಗಳಲ್ಲಿ ಪಂದ್ಯಗಳನ್ನು ನೇರ ಪ್ರಸಾರ ಮಾಡಿದ್ದು ದಾಖಲೆಯ ಪುಟ ಸೇರಿತ್ತು. ಆ ಟೂರ್ನಿಯ ಪಂದ್ಯಗಳನ್ನು ವಿಶ್ವದಾದ್ಯಂತ ಒಟ್ಟು 220 ಕೋಟಿ ಮಂದಿ ವೀಕ್ಷಿಸಿದ್ದರು. ಹೀಗಾಗಿ 2015ರ ವಿಶ್ವಕಪ್‌ನ ಪ್ರಾಯೋಜಕತ್ವಕ್ಕಾಗಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಆಗಲೂ ಇಎಸ್‌ಪಿಎನ್ ಸಂಸ್ಥೆಯ ಕೈ ಮೇಲಾಗಿತ್ತು. ಈಗ ಇಂಗ್ಲೆಂಡ್‌ನಲ್ಲಿ ಮತ್ತೆ ವಿಶ್ವಕಪ್ ಕಲರವ ಶುರುವಾಗಿದೆ. ಈ ಬಾರಿ ಮಾಧ್ಯಮ ಹಕ್ಕುಗಳಿಂದಲೇ ಐಸಿಸಿಗೆ ₹1,200 ರಿಂದ ₹1,500 ಕೋಟಿ ಆದಾಯ ಸಿಗುವ ನಿರೀಕ್ಷೆ ಇದೆ.

1975

ಆತಿಥ್ಯ: ಇಂಗ್ಲೆಂಡ್

ಪ್ರಾಯೋಜಕರು: ಪ್ರುಡೆನ್ಶಿಯಲ್ ಕಂಪನಿ.

ಒಟ್ಟು ಬಹುಮಾನ ಮೊತ್ತ: ₹17.10 ಲಕ್ಷ

ವಿಜೇತರು: ವೆಸ್ಟ್ ಇಂಡೀಸ್.

ಬಹುಮಾನ: ₹76 ಸಾವಿರ

1979

ಆತಿಥ್ಯ: ಇಂಗ್ಲೆಂಡ್

ಪ್ರಾಯೋಜಕರು: ಪ್ರುಡೆನ್ಶಿಯಲ್ ಕಂಪನಿ.

ಒಟ್ಟು ಬಹುಮಾನ ಮೊತ್ತ: ₹ 4.66 ಲಕ್ಷ

ವಿಜೇತರು: ವೆಸ್ಟ್ ಇಂಡೀಸ್.

ಬಹುಮಾನ: ₹1.8 ಲಕ್ಷ

1983

ಆತಿಥ್ಯ: ಇಂಗ್ಲೆಂಡ್

ಪ್ರಾಯೋಜಕರು: ಪ್ರುಡೆನ್ಶಿಯಲ್ ಕಂಪನಿ.

ಒಟ್ಟು ಬಹುಮಾನ ಮೊತ್ತ: ₹11.25 ಲಕ್ಷ

ವಿಜೇತರು: ಭಾರತ.

ಬಹುಮಾನ: ₹3.40 ಲಕ್ಷ

1987

ಆತಿಥ್ಯ: ಭಾರತ–ಪಾಕಿಸ್ತಾನ

ಪ್ರಾಯೋಜಕರು: ರಿಲಯನ್ಸ್ ಇಂಡಸ್ಟ್ರೀಸ್.

ಒಟ್ಟು ಬಹುಮಾನ ಮೊತ್ತ: ₹24.82 ಲಕ್ಷ

ವಿಜೇತರು: ಆಸ್ಟ್ರೇಲಿಯಾ.

ಬಹುಮಾನ: ₹7.5 ಲಕ್ಷ

1992

ಆತಿಥ್ಯ: ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್

ಪ್ರಾಯೋಜಕರು: ಬೆನ್ಸನ್ ಆ್ಯಂಡ್ ಹೆಡ್ಜಸ್

ಒಟ್ಟು ಬಹುಮಾನ ಮೊತ್ತ: ₹61.36 ಲಕ್ಷ

ವಿಜೇತರು: ಪಾಕಿಸ್ತಾನ

ಬಹುಮಾನ: ₹10.66 ಲಕ್ಷ

ಟೂರ್ನಿಯ ಶ್ರೇಷ್ಠ ಆಟಗಾರ: ಮಾರ್ಟಿನ್ ಕ್ರೋವ್ (ನ್ಯೂಜಿಲೆಂಡ್)

ಪ್ರಶಸ್ತಿ: ನಿಸಾನ್ –300 ಕಾರು.

1996

ಆತಿಥ್ಯ: ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ

ಪ್ರಾಯೋಜಕರು: ವಿಲ್ಸ್

ಒಟ್ಟು ಬಹುಮಾನ ಮೊತ್ತ: ₹1.14 ಕೋಟಿ

ವಿಜೇತರು: ಶ್ರೀಲಂಕಾ

ಬಹುಮಾನ: ₹17.10 ಲಕ್ಷ

ಟೂರ್ನಿಯ ಶ್ರೇಷ್ಠ ಆಟಗಾರ: ಸನತ್ ಜಯಸೂರ್ಯ (ಶ್ರೀಲಂಕಾ).

ಪ್ರಶಸ್ತಿ: ಆಡಿ–4 ಕಾರು.

1999

ಆತಿಥ್ಯ: ಇಂಗ್ಲೆಂಡ್

ಪ್ರಾಯೋಜಕರು: ಎಮಿರೇಟ್ಸ್, ನಾಟ್‌ವೆಸ್ಟ್, ಪೆಪ್ಸಿ ಮತ್ತು ವೊಡಾಫೋನ್.

ಒಟ್ಟು ಬಹುಮಾನ ಮೊತ್ತ: ₹4.2 ಕೋಟಿ

ವಿಜೇತರು: ಆಸ್ಟ್ರೇಲಿಯಾ

ಬಹುಮಾನ: ₹1.26 ಕೋಟಿ

ಟೂರ್ನಿಯ ಶ್ರೇಷ್ಠ ಆಟಗಾರ: ಲ್ಯಾನ್ಸ್ ಕ್ಲೂಸ್ನರ್ (ದಕ್ಷಿಣ ಆಫ್ರಿಕಾ).

ಬಹುಮಾನ: ಡೇವೂ ಮುಸ್ಸೊ ಕಾರು.

2003

ಆತಿಥ್ಯ: ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ಕೆನ್ಯಾ.

ಪ್ರಾಯೋಜಕರು: ಗ್ಲೋಬಲ್ ಕ್ರಿಕೆಟ್ ಕಾರ್ಪೊರೇಷನ್ (ಜಿಸಿಸಿ).

ಒಟ್ಟು ಬಹುಮಾನ ಮೊತ್ತ: ₹24 ಕೋಟಿ

ವಿಜೇತರು: ಆಸ್ಟ್ರೇಲಿಯಾ

ಬಹುಮಾನ: ₹9.48 ಕೋಟಿ

ಟೂರ್ನಿಯ ಶ್ರೇಷ್ಠ ಆಟಗಾರ: ಸಚಿನ್ ತೆಂಡೂಲ್ಕರ್ (ಭಾರತ).

ಪ್ರಶಸ್ತಿ: ಚಿನ್ನದ ಬ್ಯಾಟ್.

2007

ಆತಿಥ್ಯ: ವೆಸ್ಟ್ ಇಂಡೀಸ್

ಪ್ರಾಯೋಜಕರು: ಗ್ಲೋಬಲ್ ಕ್ರಿಕೆಟ್ ಕಾರ್ಪೊರೇಷನ್ (ಜಿಸಿಸಿ)

ಒಟ್ಟು ಬಹುಮಾನ ಮೊತ್ತ: ₹24.30 ಕೋಟಿ

ವಿಜೇತರು: ಆಸ್ಟ್ರೇಲಿಯಾ

ಬಹುಮಾನ: ₹11.34 ಕೋಟಿ

ಟೂರ್ನಿಯ ಶ್ರೇಷ್ಠ ಆಟಗಾರ: ಗ್ಲೆನ್ ಮೆಕ್‌ಗ್ರಾ (ಆಸ್ಟ್ರೇಲಿಯಾ)

ಪ್ರಶಸ್ತಿ: ವಜ್ರದ ಹರಳುಗಳಿಂದ ಕೂಡಿದ್ದ ಕ್ರಿಕೆಟ್ ಚೆಂಡು.

2011

ಆತಿಥ್ಯ: ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ.

ಪ್ರಾಯೋಜಕರು: ಇಎಸ್‌ಪಿಎನ್

ಒಟ್ಟು ಬಹುಮಾನ ಮೊತ್ತ: ₹49.20 ಕೋಟಿ

ವಿಜೇತರು: ಭಾರತ

ಬಹುಮಾನ: ₹15.58 ಕೋಟಿ

ಟೂರ್ನಿಯ ಶ್ರೇಷ್ಠ ಆಟಗಾರ: ಯುವರಾಜ್ ಸಿಂಗ್ (ಭಾರತ).

2015

ಆತಿಥ್ಯ: ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್.

ಪ್ರಾಯೋಜಕರು: ಇಎಸ್‌ಪಿಎನ್– ಸ್ಟಾರ್‌ಸ್ಪೋರ್ಟ್ಸ್

ಒಟ್ಟು ಬಹುಮಾನ ಮೊತ್ತ: ₹67 ಕೋಟಿ

ವಿಜೇತರು: ಆಸ್ಟ್ರೇಲಿಯಾ

ಬಹುಮಾನ: ₹26.63 ಕೋಟಿ

ಟೂರ್ನಿಯ ಶ್ರೇಷ್ಠ ಆಟಗಾರ: ಮಿಷೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ).

2019

ಆತಿಥ್ಯ: ಇಂಗ್ಲೆಂಡ್ ಮತ್ತು ವೇಲ್ಸ್

ಪ್ರಾಯೋಜಕರು: ಊಬರ್.

ಒಟ್ಟು ಬಹುಮಾನ ಮೊತ್ತ: ₹69.69 ಕೋಟಿ

ವಿಜೇತರಿಗೆ: ₹27.88 ಕೋಟಿ

ರನ್ನರ್ಸ್ ಅಪ್: ₹13.94 ಕೋಟಿ

ಅಂಕಿ –ಅಂಶ ಮಾಹಿತಿ: ಕ್ರಿಕ್ ಇನ್ಫೊ ಮತ್ತು ರಾಯಿಟರ್ಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.