ರಿಯಾದ್: ಯುವ ಆಟಗಾರ ಗಾವಿ ಅವರ ಕಾಲ್ಚಳಕದ ನೆರವಿನಿಂದ ಬಾರ್ಸಿಲೋನಾ ತಂಡ ಸ್ಪಾನಿಷ್ ಸೂಪರ್ ಕಪ್ ಫುಟ್ಬಾಲ್ ಟೂರ್ನಿ ಗೆದ್ದುಕೊಂಡಿತು.

ಸೌದಿ ಅರೇಬಿಯಾದ ರಿಯಾದ್ನಲ್ಲಿ ಭಾನುವಾರ ನಡೆದ ಫೈನಲ್ನಲ್ಲಿ ಬಾರ್ಸಿ ಲೋನಾ 3–1 ಗೋಲುಗಳಿಂದ ರಿಯಲ್ ಮ್ಯಾಡ್ರಿಡ್ ತಂಡವನ್ನು ಮಣಿಸಿತು. ಗಾವಿ ಅವರು 33ನೇ ನಿಮಿಷದಲ್ಲಿ ಬಾರ್ಸಿಲೋನಾ ತಂಡದ ಗೋಲಿನ ಖಾತೆ ತೆರೆದರು. ವಿರಾಮಕ್ಕೆ ಕೆಲವೇ ನಿಮಿಷಗಳಿರುವಾಗ ರಾಬರ್ಡ್ ಲೆವಂಡೊವ್ಸ್ಕಿ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು.

ಪೆಡ್ರಿ ಗೊನ್ಸಾಲೆಸ್ 69 ನೇ ನಿಮಿ ಷದಲ್ಲಿ ಮೂರನೇ ಗೋಲು ತಂದುಕೊಟ್ಟರು. ಎರಡು ಮತ್ತು ಮೂರನೇ ಗೋಲುಗಳಿಗೆ ಅಸಿಸ್ಟ್ ನೀಡಿದ ಗಾವಿ, ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಮ್ಯಾಡ್ರಿಡ್ ತಂಡದ ಏಕೈಕ ಗೋಲನ್ನು ಕರೀಂ ಬೆಂಜೆಮಾ ಹೆಚ್ಚುವರಿ ಅವಧಿಯಲ್ಲಿ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.