ಗುವಾಹಟಿ: ಚೆನ್ನೈಯಿನ್ ಎಫ್‌ಸಿ ತಂಡವನ್ನು 4–1 ಗೋಲುಗಳಿಂದ ಮಣಿಸಿದ ಎಫ್‌ಸಿ ಗೋವಾ ತಂಡದವರು ಡುರಾಂಡ್ ಕಪ್ ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದರು.

ಶನಿವಾರ ನಡೆದ ಪಂದ್ಯದಲ್ಲಿ ಕಾರ್ಲ್ ಮೆಕ್‌ಹ್ಯೂ (30ನೇ ನಿ.), ಕಾರ್ಲೊಸ್ ಮಾರ್ಟಿನೆಜ್ (37), ನೋಅ ಸದೌಯಿ (90+1) ಮತ್ತು ವಿಕ್ಟರ್ ರಾಡ್ರಿಗ್ವೆಜ್ (90+3) ಅವರು ಗೋವಾ ತಂಡದ ಪರ ಗೋಲು ಗಳಿಸಿದರು. ಚೆನ್ನೈ ತಂಡದ ಏಕೈಕ ಗೋಲನ್ನು ವಿಕಾಶ್ ಯುಮ್ನಮ್ ಐದನೇ ನಿಮಿಷದಲ್ಲಿ ತಂದಿತ್ತರು.

ಆರಂಭದಲ್ಲಿ ಮುನ್ನಡೆ ಗಳಿಸಿದರೂ ಚೆನ್ನೈ ತಂಡಕ್ಕೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ಆಗಲಿಲ್ಲ. ಗೋವಾ ತಂಡ ಆಕ್ರಮಣಕಾರಿ ಆಟವಾಡಿ ಎದುರಾಳಿಗಳ ಮೇಲೆ ಒತ್ತಡ ಹೇರಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.