ಅಸುನ್ಸಿಯಾನ್, ಪರಗ್ವೆ:ಈ ವರ್ಷದ ಫುಟ್ಬಾಲ್ ಟೂರ್ನಿಗಳು ಯಾವಾಗ ಆರಂಭವಾಗುತ್ತದೆಯೋ ಎಂದು ಫಿಫಾ ಮುಖ್ಯಸ್ಥ ಗಿಯಾನಿ ಇನ್ಫೆಂಟಿನೊ ಬೇಸರ ವ್ಯಕ್ತಪಡಿಸಿದ್ದಾರೆ. ಫುಟ್ಬಾಲ್ ಚಟುವಟಿಕೆ ಆರಂಭವಾದ ನಂತರ ಈ ಕ್ರೀಡೆಯ ರೂಪವೇ ಬದಲಾಗುವ ಸಾಧ್ಯತೆಯೂ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

‘ಜಗತ್ತಿನಾದ್ಯಂತ ಫುಟ್ಬಾಲ್ ಚಟುವಟಿಕೆ ನಾಳೆಯೇ ಆರಂಭವಾಗಬೇಕು ಎಂಬುದು ನಮ್ಮೆಲ್ಲರ ಬಯಕೆ. ಆದರೆ ಇದು ಅಸಾಧ್ಯ. ಕೊರೊನಾದಿಂದ ಸೃಷ್ಟಿಯಾಗಿರುವ ಭೀತಿ ಎಂದು ಕಡಿಮೆಯಾಗುತ್ತದೆಯೋ ಯಾರಿಗೂ ಹೇಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ದಕ್ಷಿಣ ಅಮೆರಿಕದ ಫಟ್ಬಾಲ್ ಸಂಸ್ಥೆಗಳ ಮುಖ್ಯಸ್ಥರ ಜೊತೆ ನಡೆಸಿದ ವಿಡಿಯೊ ಸಂವಾದದಲ್ಲಿ ಇನ್ಫೆಂಟಿನೊ ಹೇಳಿದ್ದಾರೆ.

‘ಕ್ರೀಡಾ ಚಟುವಟಿಕೆಗಳು ಆರಂಭವಾಗಬೇಕು ನಿಜ. ಈಗ ಅದಕ್ಕಿಂತಲೂ ತುರ್ತಾಗಿ ತೊಂದರೆ ಅನುಭವಿಸುತ್ತಿರುವವರಿಗೆ ಧೈರ್ಯ ತುಂಬಬೇಕಾದ ಮತ್ತು ನೆರವು ನೀಡಬೇಕಾದ ಅಗತ್ಯವಿದೆ. ಸದ್ಯದ ಪರಿಸ್ಥಿತಿಯಲ್ಲಿ ನಮಗೆಲ್ಲ ಆರೋಗ್ಯದ ಮೇಲಿನ ಕಾಳಜಿಯೇ ಮುಖ್ಯ ವಿಷಯ ಆಗಬೇಕಾಗಿದೆ’ ಎಂದು ಅವರು ನುಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.