ಜೆಮ್ಶೆಡ್ಪುರ: ಟಿಮ್ ಖಾಹಿಲ್ ಮತ್ತು ಫಾರೂಕ್ ಚೌಧರಿ ಗಳಿಸಿದ ಗೋಲುಗಳ ನೆರವಿನಿಂದ ಆತಿಥೇಯ ಜೆಮ್ಶೆಡ್ಪುರ ಎಫ್ಸಿ ತಂಡದವರು ಇಂಡಿಯನ್ ಸೂಪರ್ ಲೀಗ್ (ಐಎಎಸ್ಎಲ್) ಫುಟ್ಬಾಲ್ ಟೂರ್ನಿಯ ಬುಧವಾರದ ಪಂದ್ಯದಲ್ಲಿ ಜಯ ಗಳಿಸಿದರು.

ಜೆಆರ್ಡಿ ಟಾಟಾ ಸಂಕೀರ್ಣದ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜೆಎಫ್ಸಿ, 2–1ರಿಂದ ಡೆಲ್ಲಿ ಡೈನಾ ಮೋಸ್ ಎಫ್ಸಿಯನ್ನು ಮಣಿಸಿತು. 24ನೇ ನಿಮಿಷದಲ್ಲಿ ಲಾಲ್ಯಾಂಗ್ಜು ವಾಲ ಚಾಂಗ್ಟೆ ಗಳಿಸಿದ ಗೋಲಿನ ಮೂಲಕ ಡೈನಾಮೋಸ್ ಮುನ್ನಡೆ ಗಳಿಸಿತ್ತು. ಆದರೆ 29ನೇ ನಿಮಿಷದಲ್ಲಿ ಟಿಮ್ ಖಾಹಿಲ್ ತಿರುಗೇಟು ನೀಡಿದರು. 61ನೇ ನಿಮಿಷದಲ್ಲಿ ಫಾರೂಕ್ ಚೌಧರಿ ಗೋಲು ಗಳಿಸಿ ಜೆಎಫ್ಸಿಗೆ ಮುನ್ನಡೆ ತಂದುಕೊಟ್ಟರು.

ಈ ಜಯದೊಂದಿಗೆ ಜೆಎಫ್ಸಿ 19 ಪಾಯಿಂಟ್ಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿತು. ತಂಡ 12 ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿದ್ದು ಏಳು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.