ಮ್ಯಾಡ್ರಿಡ್: ತಂಡ ತೊರೆದು ಪ್ಯಾರಿಸ್ ಸೇಂಟ್ ಜರ್ಮೈನ್ ಸೇರಿದರೂ ಲಯೊನೆಲ್ ಮೆಸ್ಸಿ ಅವರನ್ನು ಅಭಿಮಾನಿಗಳು ನೆನೆಸಿಕೊಂಡರು. ಪಂದ್ಯದ 10ನೇ ನಿಮಿಷದಿಂದ ಅವರ ಹೆಸರನ್ನು ಹೇಳಿ ಕುಣಿದರು. ಇದರ ನಡುವೆ ರಿಯಲ್ ಸೊಡೀಡಡ್ ತಂವನ್ನು ಬಾರ್ಸಿಲೋನಾ ಮಣಿಸಿತು.

17 ವರ್ಷ ಜೊತೆ ಇದ್ದ ಮೆಸ್ಸಿ ತಂಡವನ್ನು ತೊರೆದ ನಂತರ ನಡೆದ ಬಾರ್ಸಿಲೋನಾ ತಂಡ ಭಾನುವಾರ ಮೊದಲ ಬಾರಿ ಕಣಕ್ಕೆ ಇಳಿದಿತ್ತು. ಸ್ಪ್ಯಾನಿಷ್ ಲೀಗ್‌ನ ಪಂದ್ಯದಲ್ಲಿ ತಂಡ ರಿಯಲ್ ಸೊಸೀಡಡ್ ವಿರುದ್ಧ 4–2ರ ಗೆಲುವು ದಾಖಲಿಸಿತು.

ಕ್ಯಾಂಪ್ ನೌ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಸೇರಿದ್ದರು. ಈ ಪೈಕಿ ಹೆಚ್ಚಿನವರು ಮೆಸ್ಸಿ ಅವರ ಹೆಸರನ್ನು ಕೂಗುತ್ತಿದ್ದರು. ಅವರು ತಂಡ ತೊರೆಯಲು ಅನುವು ಮಾಡಿದ್ದಕ್ಕೆ ಕ್ಲಬ್ ವಿರುದ್ಧ ಪ್ರತಿಭಟನೆಯೂ ವ್ಯಕ್ತವಾಯಿತು.

ಮೆಸ್ಸಿ ತೊಡುತ್ತಿದ್ದ 10ನೇ ನಂಬರ್ ಜೆರ್ಸಿಯ ನೆನಪಿಗಾಗಿ 10ನೇ ನಿಮಿಷದಲ್ಲಿ ಪ್ರೇಕ್ಷಕರು ಅವರ ಹೆಸರನ್ನು ಹೇಳಲು ಶುರು ಮಾಡಿದರು. ಕೆಲವರು 10ನೇ ಸಂಖ್ಯೆಯ ಜೆರ್ಸಿ ತೊಟ್ಟಿದ್ದರೆ ಇನ್ನು ಕೆಲವರು ಅವರ ಹೆಸರು ಇರುವ ಜೆರ್ಸಿಯನ್ನು ಕೈಯಲ್ಲಿ ಹಿಡಿದು ಬೀಸಿದರು. ಮತ್ತೆ ಕೆಲವರು ಬ್ಯಾನರ್ ಹಿಡಿದುಕೊಂಡಿದ್ದರು.

ಪಂದ್ಯದ 19ನೇ ನಿಮಿಷದಲ್ಲಿ ಪೀಕಿ ಅವರು ಹೆಡರ್ ಮೂಲಕ ಗಳಿಸಿದ ಗೋಲಿನೊಂದಿಗೆ ಬಾರ್ಸಿಲೋನಾ ಮುನ್ನಡೆ ಸಾಧಿಸಿತು. 59ನೇ ನಿಮಿಷದಲ್ಲಿ ಮಾರ್ಟಿನ್ ಬ್ರಾಥ್‌ವೇಟ್ 49 ಮತ್ತು 59ನೇ ನಿಮಿಷಗಳಲ್ಲಿ ಗೋಲು ತಂದುಕೊಟ್ಟರು. ಇಂಜುರಿ ಅವಧಿಯಲ್ಲಿ ಸರ್ಜಿ ರಾಬರ್ಟೊ ಗಳಿಸಿದ ಗೋಲಿಗೂ ಮಾರ್ಟಿನ್ ನೆರವಾದರು.

82ನೇ ನಿಮಿಷದಲ್ಲಿ ಫ್ರೀಕಿಕ್‌ನಲ್ಲಿ ಗಳಿಸಿದ ಗೋಲಿನೊಂದಿಗೆ ಜೂಲನ್ ಲೊಬಿಟೆ ಅವರು ಸೊಸೀಡಡ್ ತಂಡಕ್ಕೆ ಮೊದಲ ಗೋಲು ಗಳಿಸಿಕೊಟ್ಟರೆ, ಮೂರು ನಿಮಿಷಗಳ ನಂತರ ಮೈಕೆಲ್ ಒಯರ್‌ಜಬಲ್ ಮತ್ತೊಂದು ಗೋಲು ಗಳಿಸಿ ಸೋಲಿನ ಅಂತರ ಕಡಿಮೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.