ಕೋಲ್ಕತ್ತ: ಡ್ಯುರಾಂಡ್ ಕಪ್ ಫುಟ್‌ಬಾಲ್ ಟೂರ್ನಿಯ 132ನೇ ಆವೃತಿ ಗುರುವಾರ ಆರಂಭವಾಗಲಿದ್ದು, ಹಾಲಿ ಇಂಡಿಯನ್ ಸೂಪರ್ ಲೀಗ್ ಚಾಂಪಿಯನ್ನರಾದ ಮೋಹನ್ ಬಾಗನ್ ಸೂಪರ್ ಜೈಂಟ್ ತಂಡದ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಈ ಸ್ಥಳೀಯ ದೈತ್ಯ ತಂಡ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಆರ್ಮಿ ಎಫ್‌ಸಿ ತಂಡವನ್ನು ಎದುರಿಸಲಿದೆ.

ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ತಂಡಗಳ ಜೊತೆಗೆ, ಉತ್ತಮ ಸಾಧನೆಯೊಡನೆ ಎರಡನೇ ಸ್ಥಾನ ಪಡೆದ ಎರಡು ತಂಡಗಳಷ್ಟೇ ಎಂಟರ ಘಟಕ್ಕೆ ಅರ್ಹತೆ ಪಡೆಯಲಿವೆ. ಹೀಗಾಗಿ ಪ್ರತಿ ಪಂದ್ಯವೂ ತಂಡಗಳಿಗೆ ಮಹತ್ವದ್ದಾಗಿರಲಿದೆ.

ಈ ಗುಂಪಿನಲ್ಲಿ ಬಾಂಗ್ಲಾ ಸೇನಾ ತಂಡದ ಜೊತೆ ಸಾಂಪ್ರದಾಯಿಕ ಎದುರಾಳಿ ಈಸ್ಟ್ ಬೆಂಗಾಲ್ ಹಾಗೂ ಪಂಜಾಬ್ ಎಫ್‌ಸಿ ಕೂಡ ಇದೆ. ಐ ಲೀಗ್ ಚಾಂಪಿಯನ್ನರಾದ ಪಂಜಾಬ್ ಈಗ ಐಎಸ್‌ಎಲ್‌ಗೆ ಬಡ್ತಿ ಪಡೆದಿದೆ.

27 ವರ್ಷಗಳ ನಂತರ ಈ ಟೂರ್ನಿಯಲ್ಲಿ ಎರಡು ವಿದೇಶಿ ತಂಡಗಳು ಭಾಗವಹಿಸುತ್ತಿವೆ. ಬಾಂಗ್ಲಾದೇಶದ ತಂಡದ ಜೊತೆಗೆ ನೇಪಾಳದ ತಂಡವೂ ಕಣದಲ್ಲಿದೆ. ಈ ಟೂರ್ನಿ ಏಷ್ಯಾದ ಅತ್ಯಂತ ಹಳೆಯ ಮತ್ತು ವಿಶ್ವದ ಮೂರನೇ ಹಳೆಯ ಟೂರ್ನಿಯಾಗಿದೆ. ಸೆ.3ರಂದು ಟೂರ್ನಿಯ ಫೈನಲ್ ನಡೆಯಲಿದೆ. ಕೋಲ್ಕತ್ತದ ಜೊತೆಗೆ ಗುವಾಹಟಿ ಮತ್ತು ಕೊಕ್ರಝಾರ್‌ನಲ್ಲೂ ಪಂದ್ಯಗಳು ನಡೆಯಲಿವೆ.

ಟೂರ್ನಿಯಲ್ಲಿ ಮೊದಲ ಸಲ 24 ತಂಡಗಳು ಭಾಗವಹಿಸುತ್ತಿದ್ದು, ಇವುಗಳನ್ನು ಆರು ಗುಂಪುಗಳಲ್ಲಿ ವಿಂಗಡಿಸಲಾಗಿದೆ.

2022ರ ಡ್ಯುರಾಂಡ್ ಕಪ್ ಫೈನಲ್‌ನಲ್ಲಿ ಬೆಂಗಳೂರು ಎಫ್‌ಸಿ 2–1 ರಿಂದ ಮುಂಬೈ ಸಿಟಿ ಎಫ್‌ಸಿ ಮೇಲೆ ಜಯಗಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.