ಬಾರ್ಸಿಲೋನಾ: ಅರ್ಜೆಂಟೀನಾದ ಹಿರಿಯ ಫುಟ್ಬಾಲ್ ಆಟಗಾರ ಲಯೊನೆಲ್ ಮೆಸ್ಸಿ, ಕಣ್ಣೀರಿಡುತ್ತಲೇ ಬಾರ್ಸಿಲೋನಾ ಎಫ್ಸಿ ತಂಡವನ್ನು ತೊರೆಯುವುದಾಗಿ ಘೋಷಿಸಿದ್ದಾರೆ.

ಬಾರ್ಸಿಲೋನಾ ಯಶಸ್ಸಿನಲ್ಲಿ ಮಹತ್ತರ ಪಾತ್ರ ವಹಿಸಿರುವ ಮೆಸ್ಸಿ, ಯಾವತ್ತಿಗೂ ಈ ತಂಡವನ್ನು ತೊರೆಯಲು ಬಯಸುವುದಿಲ್ಲ ಎಂದು ಹೇಳಿದ್ದರು. ಆದರೆ ಈಗ ಅನಿವಾರ್ಯವಾಗಿ ತಂಡವನ್ನು ತೊರೆಯುತ್ತಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

PHOTOS | Copa America | ಮೆಸ್ಸಿ ಕನಸು ನನಸು, ಕಣ್ಣೀರಿಟ್ಟ ನೇಮರ್...

'ನಾನು ಅತೀವ ವಿನಯ ಹಾಗೂ ಗೌರವದಿಂದ ವರ್ತಿಸಲು ಪ್ರಯತ್ನಿಸಿದ್ದೇನೆ. ಬಾರ್ಸಿಲೋನಾ ತಂಡವನ್ನು ತೊರೆಯುವಾಗ ಇದೊಂದೇ ನನ್ನ ಬಳಿ ಉಳಿಯುತ್ತದೆ' ಎಂದು ಹೇಳಿದ್ದಾರೆ.

ಲಯೊನೆಲ್ ಮೆಸ್ಸಿ, ಬಾರ್ಸಿಲೋನಾ ತಂಡವನ್ನು ತೊರೆದಿರುವುದು ಕೋಟ್ಯಂತರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.

34 ವರ್ಷದ ಮೆಸ್ಸಿ, ಕಳೆದ 21 ವರ್ಷಗಳಿಂದಬಾರ್ಸಿಲೋನಾ ತಂಡದ ಭಾಗವಾಗಿದ್ದು, ದಾಖಲೆಯ 682 ಗೋಲುಗಳನ್ನು ಗಳಿಸಿದ್ದಾರೆ.

ಲಯೊನೆಲ್ ಮೆಸ್ಸಿ ಭವಿಷ್ಯದ ಯೋಜನೆಗಳು ಏನಾಗಲಿದೆ, ಯಾವ ತಂಡವನ್ನು ಸೇರಲಿದ್ದಾರೆ ಎಂಬುದರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ.

ವಿಶ್ವದಲ್ಲಿ ಅತಿ ಹೆಚ್ಚು ಆದಾಯ ಹೊಂದಿರುವ ಆಟಗಾರ ಲಯೊನೆಲ್ ಮೆಸ್ಸಿ ಅವರೊಂದಿಗಿನ ಒಪ್ಪಂದ ಮುಂದುವರಿಸಲು ಬಾರ್ಸಿಲೋನಾ ಎಫ್ಸಿ ಆಸಕ್ತಿ ತೋರಿರಲಿಲ್ಲ ಎಂಬುದು ವರದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.