ಕ್ವಾಲಾಲಾಂಪುರ: ಗುಂಪು ಹಂತದಲ್ಲಿ ಅಜೇಯ ಆಟವಾಡಿದ ಭಾರತದ ಪಂಕಜ್ ಅಡ್ವಾಣಿ ಅವರು ವಿಶ್ವ 6–ರೆಡ್ ಸ್ನೂಕರ್ ಚಾಂಪಿಯನ್‌ಷಿಪ್‌ನ ನಾಕೌಟ್ ಹಂತಕ್ಕೆ ಲಗ್ಗೆಯಿಟ್ಟರು.

ಇಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಗುಂಪು ಹಂತದ ಮೊದಲ ಪಂದ್ಯದಲ್ಲಿ ಪಂಕಜ್ 4–0ಯಿಂದ ಲಿಬಿಯಾದ ಮೊಹಮ್ಮದ್ ಇಮೀಶ್ ಅವರನ್ನು ಪರಾಭವಗೊಳಿಸಿದರು. ಬಳಿಕ 4–1ರಿಂದ ಮಂಗೋಲಿಯಾದ ಎಂಕ್‌ತುವಿಷಿನ್ ಬಾತೊಚಿರ್ ಎದುರು ಗೆದ್ದರು.

ಬಿ ಗುಂಪಿನ ಅಂತಿಮ ಪಂದ್ಯದಲ್ಲಿ ಕರ್ನಾಟಕದ ಪಂಕಜ್ 4–2ರಿಂದ ಮಲೇಷ್ಯಾದ ಲೊಹ್ ಚುಂಗ್ ಲಿಯೊಂಗ್ ಅವರನ್ನು ಸೋಲಿಸಿದರು. ಹಣಾಹಣಿಯ ಆರಂಭದಲ್ಲಿ 2–0ಯಿಂದ ಮುನ್ನಡೆ ಗಳಿಸಿದ ಪಂಕಜ್ ಗೆಲುವಿನತ್ತ ದಾಪುಗಾಲಿಟ್ಟಿದ್ದರು. ಆದರೆ ಬಳಿಕ ಎರಡು ಫ್ರೇಮ್ ತಮ್ಮದಾಗಿಸಿಕೊಂಡಲಿಯೊಂಗ್ ಸಮಬಲ ಸಾಧಿಸಿದರು. ಕೊನೆಯ ಹಂತದಲ್ಲಿ ಒತ್ತಡ ಮೀರಿದ ಪಂಕಜ್ ಸತತ ಎರಡು ಫ್ರೇಮ್ ಜಯಿಸಿ ಪಂದ್ಯ ಕೈವಶ ಮಾಡಿಕೊಂಡರು.

ಪಂಕಜ್ ಅವರು ಮುಂದಿನ ಪಂದ್ಯದಲ್ಲಿ ಮಲೇಷ್ಯಾದ ಲಿಮ್ ಕೊಕ್ ಲಿಯೊಂಗ್ ಎದುರು ಆಡುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.