ತುಮಕೂರು: ಆರ್ಕಾ ಮೋಟರ್‌ಸ್ಪೋರ್ಟ್ಸ್‌ನ ಹರಿಕೃಷ್ಣ ವಾಡಿಯಾ ಮತ್ತು ಅವರ ಸಹಚಾಲಕ ಕುನಾಲ್ ಕಶ್ಯಪ್ ಅವರು ಬ್ಲ್ಯೂ ಬ್ಯಾಂಡ್ ಕೆ 1000 ರ‍್ಯಾಲಿ ಪ್ರಶಸ್ತಿ ಜಯಿಸಿದರು.

ಶನಿವಾರ ಗುಬ್ಬಿ ಸಮೀಪ ನಡೆದ ರ‍್ಯಾಲಿಯಲ್ಲಿ ವಾಡಿಯಾ ಮುನ್ನಡೆ ಸಾಧಿಸಿದರು. ಇದರೊಂದಿಗೆ ಅವರು ಐಎನ್‌ಆರ್‌ಎಸ್ 2 ಪ್ರಶಸ್ತಿ ಮತ್ತು 40 ಅಂಕಗಳನ್ನು ತಮ್ಮದಾಗಿಸಿಕೊಂಡರು. 1 ಗಂಟೆ, 26 ನಿಮಿಷ, 53.5 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಸಮಗ್ರ ಪ್ರಶಸ್ತಿ ಗೆದ್ದರು.

ಪಿವಿಟಿಯ ಡೀನ್ ಮಸ್ಕರೇನಸ್ ಮತ್ತು ಗಗನ್ ಕರುಂಬಯ್ಯ ಅವರು ಎರಡನೇ ಸ್ಥಾನ ಗಳಿಸಿದರು. ಸ್ನ್ಯಾಪ್ ರೇಸಿಂಗ್‌ನ ಯೂನುಸ್ ಇಲಿಯಾಸ್ ಮತ್ತು ನಿತಿನ್ ಜೇಕಬ್ ಮೂರನೇ ಸ್ಥಾನ ಗಳಿಸಿದರು.

ಐಎನ್‌ಆರ್‌ಸಿ 2 ವಿಭಾಗದಲ್ಲಿ ವಾಡಿಯಾ–ಕುನಾಲ್ ಮೊದಲಿಗರಾದರು. ಜೆಒ ಒನ್ ರ‍್ಯಾಲಿಂಗ್‌ನ ಚೇತನ್ ಶಿವರಾಂ ಮತ್ತು ಇ ಶಿವಪ್ರಕಾಶ್ ಎರಡನೇ ಹಾಗೂ ಪಿವಿಟಿಯ ರಿತೇಶ್ ಗುತ್ತೇದಾರ್ ಮತ್ತು ಎಂ.ಸೂರಜ್ ಮೂರನೇ ಸ್ಥಾನ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.