ಅಡಿಲೇಡ್: ಆಸ್ಟ್ರೇಲಿಯಾದ ಈಜುಪಟು ಕೈಲಿ ಮೆಕಿಯೊನ್ ಅವರು ಮಹಿಳೆಯರ 100 ಮೀಟರ್ ಬ್ಯಾಕ್ಟ್‌ಸ್ಟ್ರೋಕ್ ವಿಭಾಗದಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯನ್ ಒಲಿಂಪಿಕ್ಸ್ ಟ್ರಯಲ್ಸ್‌ನಲ್ಲಿ ಭಾನುವಾರ ಅವರು ಈ ಸಾಧನೆ ಮಾಡಿದರು.

19 ವರ್ಷದ ಮೆಕಿಯೊನ್ 57.45 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಅಮೆರಿಕದ ರೇಗನ್ ಸ್ಮಿತ್ ಅವರು 2019ರಲ್ಲಿ ನಿರ್ಮಿಸಿದ್ದ ದಾಖಲೆಯನ್ನು (57.57 ಸೆಕೆಂಡು) ಅಳಿಸಿಹಾಕಿದರು.

ಮೆಕಿಯೊನ್ ಅವರ ತಂದೆ ಶೊಲ್ಟೊ ಅವರ ಕಳೆದ ಆಗಸ್ಟ್‌ನಲ್ಲಿ ಮೆದುಳಿನ ಕ್ಯಾನ್ಸರ್‌ನಿಂದ ಅಸುನೀಗಿದ್ದರು.

ತನ್ನ ಸಾಧನೆಗೆ ತಂದೆಯೇ ಪ್ರೇರಣೆ ಎಂದು ಮೆಕಿಯೊನ್ ಹೇಳಿದ್ದಾರೆ.

ಮೆಕಿಯೊನ್ ಕಳೆದ ತಿಂಗಳು 100 ಮೀ. ಬ್ಯಾಕ್‌ಸ್ಟ್ರೋಕ್‌ಅನ್ನು 57.63 ಸೆಕೆಂಡುಗಳಲ್ಲಿ ಕೊನೆಗೊಳಿಸುವುದರೊಂದಿಗೆ ಕಾಮನ್‌ವೆಲ್ತ್ ಮತ್ತು ಆಸ್ಟ್ರೇಲಿಯನ್ ದಾಖಲೆ ಸ್ಥಾಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.