ಪ್ರಾಗ್: ಭಾರತದ ಗ್ರ್ಯಾಂಡ್‌ಮಾಸ್ಟರ್ ವಿದಿತ್ ಎಸ್.ಗುಜರಾತಿ, ಪ್ಲೇ ಆಫ್ ಪಂದ್ಯದಲ್ಲಿ ಸೋಲುವ ಮೂಲಕ ಪ್ರಾಗ್ ಚೆಸ್ ಉತ್ಸವದಲ್ಲಿ ಎರಡನೇ ಸ್ಥಾನಕ್ಕೆ ಸರಿಯಬೇಕಾಯಿತು.

ಒಂಬತ್ತನೇ ಹಾಗೂ ಅಂತಿಮ ಸುತ್ತಿನ ನಂತರ ವಿದಿತ್ ಸೇರಿ ಐವರು ಆಟಗಾರರು ಸಮಾನ ಪಾಯಿಂಟ್ಸ್ ಪಡೆದು ಅಗ್ರಸ್ಥಾನ ಹಂಚಿಕೊಂಡಿದ್ದರು. ಉತ್ತಮ ಟೈಬ್ರೇಕ್ ಅಂಕ ಹೊಂದಿದ್ದ ವಿದಿತ್ ಮತ್ತು ಇರಾನ್‌ನ ಅಲಿರೇಜಾ ಫಿರೋಜ್ ಅವರು ಪ್ರಶಸ್ತಿಗಾಗಿ ಪ್ಲೇ ಆಫ್ ಪಂದ್ಯವನ್ನಾಡಿದ್ದರು. ಆದರೆ ಇದರಲ್ಲಿ ಎರಡೂ ಆಟಗಳನ್ನು ಗೆದ್ದ ಇರಾನ್‌ಮ 16 ವರ್ಷದ ಆಟಗಾರ ಮೊದಲಿಗರಾದರು.

ಇದಕ್ಕೆ ಮೊದಲು 9ನೇ ಸುತ್ತಿನಲ್ಲಿ ಗೆದ್ದರೆ ಪ್ರಶಸ್ತಿಯನ್ನೂ ಗೆಲ್ಲುವ ಅವಕಾಶ ಹೊಂದಿದ್ದ ವಿದಿತ್, ಅಗ್ರ ಶ್ರೇಯಾಂಕದ ಜೇನ್ ಕ್ರಿಸ್ಟೋಫ್ ಡುಡಾ (ಪೋಲೆಂಡ್) ಎದುರು ಸೋಲನುಭವಿಸಿದ್ದರು. ವಿದಿತ್ ಎಂಟನೇ ಸುತ್ತಿನಲ್ಲೂ ಸೋಲು ಕಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.