ರೀಗಾ, ಲಾಟ್ವಿಯಾ: ಮಾಜಿ ವಿಶ್ವ ಚಾಂಪಿಯನ್, ಬಲ್ಗೇರಿಯಾದ ಆ್ಯಂಟೊನೆಟಾ ಸ್ಟೆಫನೋವ ಅವರನ್ನು ಮಣಿಸಿದ ಭಾರತದ ಹರಿಕಾ ದ್ರೋಣವಲ್ಲಿ ಫಿಡೆ ಗ್ರ್ಯಾಂಡ್ ಚೆಸ್ ಟೂರ್ನಿಯ ಮೂರು ಸುತ್ತುಗಳ ನಂತರ ಶನಿವಾರ ಅಗ್ರ ಸ್ಥಾನ ಹಂಚಿಕೊಂಡಿದ್ದಾರೆ.

2.5 ಪಾಯಿಂಟ್‌ಗಳನ್ನು ಗಳಿಸಿರುವ ಒಂಬತ್ತು ಆಟಗಾರ್ತಿಯರು ಅಗ್ರಸ್ಥಾನದಲ್ಲಿದ್ದು ಜಾರ್ಜಿಯಾದ ಜಗ್ನಿಜೆ ಮುನ್ನಡೆಯಲ್ಲಿದ್ದಾರೆ. ಮುಂದಿನ ಸುತ್ತಿನಲ್ಲಿ ಚೀನಾದ ಜು ಜೈನರ್ ವಿರುದ್ಧ ಹರಿಕಾ ಸೆಣಸುವರು.

ಭಾರತದ ಆಟಗಾರ್ತಿಯರು ಕಣದಲ್ಲಿದ್ದ ಇತರ ಎರಡು ಪಂದ್ಯಗಳಲ್ಲಿ ಪದ್ಮಿನಿ ರಾವುತ್ ಅವರು ಆರ್.ವೈಶಾಲಿ ವಿರುದ್ಧ ಮತ್ತು ವಂತಿಕಾ ಅಗರವಾಲ್ ಅವರು ದಿವ್ಯಾ ದೇಶ್‌ಮುಖ್ ವಿರುದ್ಧ ಜಯ ಗಳಿಸಿದರು. ಪದ್ಮಿನಿ ಮತ್ತು ವಂತಿಕಾ ಮುಂದಿನ ಪಂದ್ಯಗಳಲ್ಲಿ ಕ್ರಮವಾಗಿ ರಷ್ಯಾದ ಅಲಿನಾ ಕಸ್ಲಿಸ್ಕಯ ಮತ್ತು ಅರ್ಮೇನಿಯಾದ ಅನಾ ಸರ್ಗ್‌ಸ್ಯಾನ್ ವಿರುದ್ಧ ಸೆಣಸುವರು.

ಪುರುಷರ ವಿಭಾಗದಲ್ಲಿ ಏಳನೇ ಶ್ರೇಯಾಂಕಿತ ಪಿ.ಹರಿಕೃಷ್ಣ ಅವರು ಚಿಲಿಯ ಇವಾನ್ ಮೊರೊವಿಚ್ ಫೆರ್ನಾಂಡಿಸ್ ಅವರನ್ನು ಮಣಿಸಿದರು. ನಿಹಾಲ್ ಸರೀನ್ ಅವರು ಆಸ್ಟ್ರೇಲಿಯಾದ ತೇಮುರ್ ಕುಯ್ಬಕರೊವ್ ವಿರುದ್ಧ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.