ಕಿಂಗ್ಸ್ಟನ್: ಜಗತ್ತಿನ ವೇಗದ ಓಟಗಾರಜಮೈಕಾದ ಉಸೇನ್ ಬೋಲ್ಟ್ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

ಸೋಮವಾರ ಮಧ್ಯಾಹ್ನ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದ ಬೋಲ್ಟ್, ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಆದರೂ ಸುರಕ್ಷಿತವಾಗಿರಲು ಸ್ವಯಂ ಕ್ವಾರಂಟೈನ್ಗೆ ಒಳಪಟ್ಟಿರುವುದಾಗಿ ಹೇಳಿಕೊಂಡಿದ್ದರು. ಆದರೆ, ಅವರ ವರದಿ ಪಾಸಿಟಿವ್ ಬಂದಿರುವುದಾಗಿ ಜಮೈಕಾದ ಆರೋಗ್ಯ ಸಚಿವಾಲಯ ಖಚಿತಪಡಿಸಿದೆ.

ಶನಿವಾರ 34ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಬೋಲ್ಟ್, ಮರುದಿನವೇ ಕೊರೊನಾ ಪರೀಕ್ಷೆಗೆಒಳಪಟ್ಟಿದ್ದರು.

2017ರಲ್ಲಿ ಅಥ್ಲೆಟಿಕ್ಸ್ನಿಂದ ನಿವೃತ್ತರಾದ ಬೋಲ್ಟ್, ಸತತ ಮೂರು ಒಲಿಂಪಿಕ್ಸ್ನಲ್ಲಿ (2008, 2012, 2016) 100 ಮೀ ಮತ್ತು 200 ಮೀ ಓಟ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಏಕೈಕ ಆಟಗಾರ ಎನಿಸಿದ್ದಾರೆ.

‘ಸುರಕ್ಷಿತವಾಗಿರಲು ನಾನು ಸ್ವಯಂ ಕ್ವಾರಂಟೈನ್ಗೆ ಒಳಪಟ್ಟಿದ್ದೇನೆ. ‘ಸ್ಟೇ ಸೇಫ್ ಮೈ ಪೀಪಲ್’ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದರು.

ಬೋಲ್ಟ್ ಶೀಘ್ರ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

ಜಮೈಕಾದಲ್ಲಿ ಪ್ರತಿದಿನ ದೃಢಪಟ್ಟ ಪ್ರಕರಣಗಳ ಸಂಖ್ಯೆ ಕಳೆದ ನಾಲ್ಕು ದಿನದಿಂದ 60ಕ್ಕಿಂತ ಹೆಚ್ಚಾಗಿವೆ. ಇದುವರೆಗೆ 1,612 ಪ್ರಕರಣಗಳು ದೃಢಪಟ್ಟಿದ್ದು, 16 ಮಂದಿ ಮೃತಪಟ್ಟಿದ್ದಾರೆ. ಸದ್ಯ 622 ಸಕ್ರಿಯ ಪ್ರಕರಣಗಳು ಇವೆ.

ಸೆಪ್ಟೆಂಬರ್ನಲ್ಲಿ ನಡೆಯಲಿರುವ ರಾಷ್ಟ್ರೀಯ ಚುನಾವಣೆಗಳ ಬಗ್ಗೆ ಪ್ರಧಾನಿ ಆಂಡ್ರ್ಯೂ ಹೋಲ್ನೆಸ್ ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.