ನವದೆಹಲಿ: ಹದಿನಾಲ್ಕು ವರ್ಷ ವಯಸ್ಸಿನ ಭರತ್ ಸುಬ್ರಮಣಿಯಮ್ ಭಾರತದ 73ನೇ ಚೆಸ್ ಗ್ರ್ಯಾಂಡ್ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. ಇಟಲಿಯ ವರ್ಗಾನಿ ಕಪ್ ಓಪನ್ನಲ್ಲಿ ಮೂರನೇ ಮತ್ತು ಅಂತಿಮ ಜಿ.ಎಂ ನಾರ್ಮ್ ಪೂರ್ಣಗೊಳಿಸುವ ಮೂಲಕ ಭಾನುವಾರ ಗ್ರ್ಯಾಂಡ್ಮಾಸ್ಟರ್ ಆಗಿದ್ದಾರೆ.

ಭರತ್ ಒಟ್ಟು ಒಂಬತು ಸುತ್ತುಗಳಲ್ಲಿ 6.5 ಪಾಯಿಂಟ್ಸ್ ಕಲೆ ಹಾಕಿದರು ಹಾಗೂ ಟೂರ್ನಿಯಲ್ಲಿ ಏಳನೆಯವರಾಗಿ ಆಟ ಮುಗಿಸಿದರು. ಮೂರನೇ ಜಿ.ಎಂ ನಾರ್ಮ್ ಮುಟ್ಟುವ ಜೊತೆಗೆ ಅಗತ್ಯವಿದ್ದ 2,500 ಎಲೋ ಪಾಯಿಂಟ್ಗಳ ಗಡಿಯನ್ನು ತಲುಪಿದರು.

ಚೆಸ್ನಲ್ಲಿ ಮೂರು ಜಿ.ಎಂ. ನಾರ್ಮ್ಗಳ ಜೊತೆ 2,500 ರೇಟಿಂಗ್ ಹೊಂದಿರುವ ಆಟಗಾರ ಗ್ರ್ಯಾಂಡ್ಮಾಸ್ಟರ್ ಬಿರುದಿಗೆ ಅರ್ಹರಾಗುತ್ತಾರೆ.

ಅಖಿಲ ಭಾರತ ಚೆಸ್ ಒಕ್ಕೂಟವು (ಎಐಸಿಎಫ್) ಭರತ್ ಅವರಿಗೆ ಅಭಿನಂದನೆ ತಿಳಿಸಿದೆ.

ಭಾರತದ ಮತ್ತೊಬ್ಬ ಗ್ರ್ಯಾಂಡ್ಮಾಸ್ಟರ್ ಎಂ.ಆರ್.ಲಲಿತ್ ಬಾಬು ಭಾನುವಾರದ ಆಟದಲ್ಲಿ ಗೆಲುವು ಸಾಧಿಸುವ ಮೂಲಕ ಇಟಲಿಯ ವರ್ಗಾನಿ ಕಪ್ ಓಪನ್ ಕಿರೀಟಕ್ಕೆ ಪಾತ್ರರಾದರು. ಈ ಕಪ್ನಲ್ಲಿ ಗಳಿಸಲು ಸಾಧ್ಯವಿದ್ದ 9 ಪಾಯಿಂಟ್ಗಳ ಪೈಕಿ ಲಲಿತ್ ಏಳು ಪಾಯಿಂಟ್ಗಳನ್ನು ಪಡೆದರು. ಈ ಮೂಲಕ ಗ್ರ್ಯಾಂಡ್ಮಾಸ್ಟರ್ಗಳಾದ ಅಮೆರಿಕದ ನೀಮನ್ ಹನ್ಸ್ ಮೋಕ್, ಉಕ್ರೇನ್ನ ವೈಟಾಲಿಟಿ ಬರ್ನಾಡ್ಸ್ಕಿ ಹಾಗೂ ಬಲ್ಗೇರಿಯಾದ ನರ್ಗ್ಯುಲ್ ಸಾಲಿಮೊವಾ ಅವರೊಂದಿಗೆ ಸಮ ಮಾಡಿಕೊಂಡಿದ್ದರು.

ಆದರೆ, ಟೈ ಬ್ರೇಕ್ನಲ್ಲಿ ಹೆಚ್ಚಿನ ಸ್ಕೋರ್ ಗಳಿಸಿದ ಲಲಿತ್ ಚಾಂಪಿಯನ್ ಆಗಿ ಹೊರಹೊಮ್ಮಿದರು ಹಾಗೂ ಅಮೆರಿಕದ ನೀಮನ್ ಮೊದಲ ರನ್ನರ್ ಅಪ್ ಆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.