ಬೆಂಗಳೂರು: ಸದರ್ನ್ ಕಮಾಂಡ್ ತಂಡವು ಕೆ.ಎಂ.ಕಾರ್ಯಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು. ಕೆ.ಎಂ.ಕಾರ್ಯಪ್ಪ ಹಾಕಿ ಅರೇನಾದಲ್ಲಿ ಭಾನುವಾರ ನಡೆದ ಫೈನಲ್ ಹಣಾಹಣಿಯಲ್ಲಿ ಆ ತಂಡವು 2–1ರಿಂದ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ತಂಡವನ್ನು ಸೋಲಿಸಿತು.

ವಿಜೇತ ತಂಡದ ಪರ ಎಂ.ಡಿ. ಅಲಿಶಾನ್ 8ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಮಣಿ ಸಿಂಗ್ 32ನೇ ನಿಮಿಷ ಗೋಲು ಹೊಡೆದು ಗೆಲುವಿನಲ್ಲಿ ಕಾಣಿಕೆ ನೀಡಿದರು. ಸೋತ ಸಾಯ್ ತಂಡದ ಏಕೈಕ ಗೋಲು ಮೊಹಮ್ಮದ್ ರಾಹೀಲ್ ಮೂಲಕ ಬಂತು. ಟ್ರೋಫಿ ಗೆದ್ದ ತಂಡವು ₹ 40,000 ಜೇಬಿಗಿಳಿಸಿದರೆ, ರನ್ನರ್ಅಪ್ ಸಾಯ್ ₹ 30,000 ಪಡೆಯಿತು.

ಸದರ್ನ್ ಕಮಾಂಡ್ ತಂಡದ ಎಂ.ಡಿ.ಅಲಿಶಾನ್ ಟೂರ್ನಿಯ ಶ್ರೇಷ್ಠ ಆಟಗಾರ ಎನಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.