ನವದೆಹಲಿ: ಕೋವಿಡ್–19ರಿಂದ ಬಳಲುತ್ತಿದ್ದ, ಭಾರತ ಹಾಕಿ ಅಂಪೈರ್ಗಳ ವ್ಯವಸ್ಥಾಪಕ ವೀರೇಂದ್ರ ಸಿಂಗ್ (47) ಅವರು ಸೋಮವಾರ ಮೀರತ್ನಲ್ಲಿ ನಿಧನರಾದರು.

ಹಲವು ಅಖಿಲ ಭಾರತ ಟೂರ್ನಿಗಳು ಹಾಗೂ ರಾಷ್ಟ್ರೀಯ ಚಾಂಪಿಯನ್ಷಿಪ್ಗಳಲ್ಲಿ ಕಾರ್ಯನಿರ್ವಹಿಸಿದ್ದ ವೀರೇಂದ್ರ, ಪಂದ್ಯಗಳಿಗೆ ಸೂಕ್ತ ಅಂಪೈರ್ಗಳ ಆಯ್ಕೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿದ್ದರು.

ಇತ್ತೀಚೆಗೆ ಕೊನೆಗೊಂಡ ಅಖಿಲ ಭಾರತ ವೀರಸಿಂಗ್ ಜುದೇವ್ ಸ್ಮಾರಕ ಟೂರ್ನಿ ಹಾಗೂ ರಾಜಮಾತಾ ವಿಜಯರಾಜೆ ಸಿಂಧಿಯಾ ಮಹಿಳಾ ಟೂರ್ನಿಯಲ್ಲೂ ಅವರು ಅಂಪೈರ್ಗಳ ವ್ಯವಸ್ಥಾಪಕರಾಗಿ ಕೆಲಸ ಮಾಡಿದ್ದರು. 2019ರಲ್ಲಿ ಬೆಂಗಳೂರು ಕಪ್ ಅಖಿಲ ಭಾರತ ಆಹ್ವಾನಿತ ಟೂರ್ನಿಯಲ್ಲಿ ಅವರು ಕಾರ್ಯನಿರ್ವಹಿಸಿದ್ದರು.

ಹಾಕಿ ಕ್ಷೇತ್ರವಲ್ಲದೆ ವೀರೇಂದ್ರ ಸಿಂಗ್ ರೈಲ್ವೆ ಉದ್ಯೋಗಿಯೂ ಆಗಿದ್ದರು.

‘ವೀರೇಂದ್ರ ಅವರ ನಿಧನದಿಂದ ತುಂಬಾ ದುಃಖವಾಗಿದೆ. ಹಲವು ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದರ ಜೊತೆಗೆ ಅವರು ಹಾಕಿ ಇಂಡಿಯಾದ ಹಲವು ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು‘ ಎಂದು ಹಾಕಿ ಇಂಡಿಯಾ ಅಧ್ಯಕ್ಷ ಗ್ಯಾನೆಂದ್ರೊ ನಿಂಗೊಂಬಮ್ ಹೇಳಿದ್ದಾರೆ.

ಕಳೆದ ವಾರ, ಹಾಕಿಯ ಅಂಕಿ ಅಂಶ ತಜ್ಞ ಹಾಗೂ ಇತಿಹಾಸಕಾರ ಬಾಬೂಲಾಲ್ ಗೋವರ್ಧನ್ ಜೋಷಿ ಅವರೂ ಕೋವಿಡ್ನಿಂದ ಸಾವನ್ನಪ್ಪಿದ್ದರು.

IPL 2021 – ಆಟಗಾರರು ವಾಪಸಾಗಲು ತಾವೇ ವ್ಯವಸ್ಥೆ ಮಾಡಿಕೊಳ್ಳಬೇಕು: ಆಸ್ಟ್ರೇಲಿಯಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.