ಲಾ ಪ್ಲಾನೆ, ಫ್ರಾನ್ಸ್: ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಪಿ. ಇನಿಯನ್ ಇಲ್ಲಿ ನಡೆದ ಲಾ ಪ್ಲಾನೆ ಅಂತರರಾಷ್ಟ್ರೀಯ ಚೆಸ್ ಟೂರ್ನಿಯಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ.

19 ವರ್ಷದ ಇನಿಯನ್, ಒಂಬತ್ತು ಸುತ್ತುಗಳಲ್ಲಿ ಏಳು ಪಾಯಿಂಟ್ಸ್ ಕಲೆಹಾಕಿ, ಉಕ್ರೇನ್‌ನ ವಿಟಾಲಿ ಸಿವುಕ್ (ಏಳು ಪಾಯಿಂಟ್ಸ್) ಜೊತೆ ಅಗ್ರಸ್ಥಾನ ಹಂಚಿಕೊಂಡಿದ್ದರು. ಆದರೆ ಟೈಬ್ರೇಕ್‌ನಲ್ಲಿ ಉತ್ತಮ ಸ್ಕೋರ್ ಗಳಿಸಿ ಉಕ್ರೇನ್ ಆಟಗಾರ ಪ್ರಶಸ್ತಿ ತಮ್ಮದಾಗಿಸಿಕೊಂಡರು.ಇನಿಯನ್ ಒಂಬತ್ತು ಸುತ್ತುಗಳಲ್ಲಿ ಅಜೇಯರಾಗುಳಿದರು. ಐದರಲ್ಲಿ ಜಯ ಮತ್ತು ನಾಲ್ಕರಲ್ಲಿ ಡ್ರಾ ಸಾಧಿಸಿದರು.

ಮೂರನೇ ಸ್ಥಾನವು ಭಾರತದ ಸಯಂತನ್ ದಾಸ್ (6.5) ಅವರ ಪಾಲಾಯಿತು.ಅವರು ನಾಲ್ಕು ಜಯ ಮತ್ತು ಐದು ಪಂದ್ಯಗಳಲ್ಲಿ ಡ್ರಾ ಸಾಧಿಸಿದರು. 19 ದೇಶಗಳ 95 ಸ್ಪರ್ಧಿಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ಒಂಬತ್ತು ಗ್ರ್ಯಾಂಡ್‌ಮಾಸ್ಟರ್‌ಗಳು ಮತ್ತು 18 ಮಂದಿ ಅಂತರರಾಷ್ಟ್ರೀಯ ಮಾಸ್ಟರ್‌ಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.