ಹಾಂಗ್‌ಝೌ: ಭಾರತದ ರೋಯಿಂಗ್ ಕ್ರೀಡಾಪಟುಗಳು ಮೂರು ವಿಭಾಗಗಳಲ್ಲಿ ಫೈನಲ್ ತಲುಪಿದ್ದಾರೆ.

ಗುರುವಾರ ನಡೆದ ಸ್ಪರ್ಧೆಯಲ್ಲಿ ಪುರುಷರ ಕ್ವಾಡ್ರಪಲ್ ಸ್ಕಲ್ಸ್ ವಿಭಾಗದಲ್ಲಿ ಭಾರತದ ಸತ್ನಾಮ್ ಸಿಂಗ್, ಪರಮಿಂದರ್ ಸಿಂಗ್, ಜಕಾರ್ ಖಾನ್ ಮತ್ತು ಸುಖಮೀತ್ ಸಿಂಗ್ ಅವರು ಅರ್ಹತೆ ಫೈನಲ್‌ಗೆ ಗಳಿಸಿದರು. ಅವರು 6ನಿಮಿಷ, 09.94 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಪುರುಷರ ಲೈಟ್‌ವೇಟ್ ಡಬಲ್ ಸ್ಕಲ್ಸ್ ವಿಭಾಗದಲ್ಲಿ ಭಾರತದ ಜೋಡಿ ಅರ್ಜುನ್ ಲಾಲ್ ಜಾಟ್ಮತ್ತು ಅರವಿಂದ್ ಸಿಂಗ್ ಅವರು 6ನಿ, 55.78ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಫೈನಲ್ ಪ್ರವೇಶಿಸಿದರು.

ಪುರುಷರ ಡಬಲ್ ಸ್ಕಲ್‌ನಲ್ಲಿ ಸತ್ನಾಮ್ ಸಿಂಗ್ ಮತ್ತು ಪರಮಿಂದರ್ ಸಿಂಗ್ ಜೋಡಿಯು 6ನಿ,48.06ಸೆಕೆಂಡುಗಳಲ್ಲಿ ರಿಪೇಚ್ ನಲ್ಲಿ ಗೆದ್ದರು. ಇದರೊಂದಿಗೆ ಫೈನಲ್‌ಗೆ ಲಗ್ಗೆ ಇಟ್ಟರು.

ಆದರೆ ಮಹಿಳೆಯರ ಲೈಟ್‌ವೇಟ್ ಡಬಲ್ಸ್ ಸ್ಕಲ್‌ನಲ್ಲಿ ಭಾರತ ತಂಡವು ಅಂತಿಮ ಸುತ್ತು ಪ್ರವೇಶಿಸುವಲ್ಲಿ ವಿಫಲವಾಯಿತು. ಈ ತಂಡದಲ್ಲಿ ಕಿರಣ್, ಅನಿಷ್ಕಾ ಭಾರತಿ ಇದ್ದರು. 8ನಿಮಿಷ, 01.80 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ನಾಲ್ಕನೇ ಸ್ಥಾನ ಪಡೆದರು.

ಭಾರತದ ಬಲರಾಜ್ ಪನ್ವಾರ್ ಅವರು ಪುರುಷರ ಸಿಂಗಲ್ಸ್ ವಿಭಾಗದ ಸಿಂಗಲ್ ಸ್ಕಲ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.