ಬೆಂಗಳೂರು: ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಸಂಸ್ಥೆ (ಕೆಎಸ್ಬಿಎ) ಆಶ್ರಯದಲ್ಲಿ ಆಗಸ್ಟ್ 24 ರಿಂದ 31ರವರೆಗೆ ಜೂನಿಯರ್ ಸ್ನೂಕರ್ ಚಾಂಪಿಯನ್ಷಿಪ್ ನಡೆಯಲಿದೆ.

17 ಮತ್ತು 21 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. 25 ದೇಶಗಳಿಂದ 100 ಆಟಗಾರರು ಸ್ಪರ್ಧಿಸಲಿದ್ಧಾರೆ. ಇದರಲ್ಲಿ ಸದ್ಯ ಭಾರತದ ಆರು ಸ್ಪರ್ಧಿಗಳು ಪ್ರವೇಶ ಪಡೆದಿದ್ದಾರೆ. ರ್ಯಾಂಕಿಂಗ್ ಆಧಾರದಲ್ಲಿ ಅವರಿಗೆ ಪ್ರವೇಶ ಲಭಿಸಿದೆ. ಹೆಸರು ನೋಂದಾಯಿಸಲು ಜುಲೈ 20 ಕೊನೆ ದಿನವಾಗಿದೆ.

ಕರ್ನಾಟಕದ ಆಟಗಾರರಿಗೆ ವೈಲ್ಡ್ಕಾರ್ಡ್ ಪ್ರವೇಶವನ್ನು ಸ್ಪರ್ಧೆಗಳ ಆರಂಭಕ್ಕೆ ಕೆಲವೇ ದಿನಗಳಿರುವಾಗ ನೀಡಲಾಗುವುದು. ಕೆಎಸ್ಬಿಎ ಮೂರನೇ ಬಾರಿ ವಿಶ್ವ ಜೂನಿಯರ್ ಟೂರ್ನಿಯನ್ನು ಆಯೋಜಿಸುತ್ತಿದೆ. 1991 ಮತ್ತು 2000ನೇ ಇಸವಿಯಲ್ಲಿ ಟೂರ್ನಿ ನಡೆದಿದ್ದವು.

‘11 ಮಂದಿ ಅಂತರರಾಷ್ಟ್ರೀಯ ರೆಫರಿಗಳು ಕಾರ್ಯನಿರ್ವಹಿಸುವರು. ಅದರಲ್ಲಿ ಒಬ್ಬರು ಮುಖ್ಯ ರೆಫರಿ ಕೂಡ ಇರಲಿದ್ದಾರೆ’ ಎಂದು ಕೆಎಸ್ಬಿಎ ಅಧ್ಯಕ್ಷ ಎಸ್. ಬಾಲಸುಬ್ರಮಣಿಯಂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.