ಬೆಂಗಳೂರು: ಸದರ್ನ್ ಕಮಾಂಡ್ ಹಾಗೂ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ತಂಡಗಳು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸ್ಮಾರಕರಾಜ್ಯಮಟ್ಟದ ಹಾಕಿ ಟೂರ್ನಿಯ ಫೈನಲ್ಗೆ ಲಗ್ಗೆಯಿಟ್ಟಿವೆ.

ಶಾಂತಿನಗರದ ಕೆ.ಎಂ. ಕಾರ್ಯಪ್ಪ ಅರೇನಾದಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ಸೆಮಿಫೈನಲ್ ಹಣಾಹಣಿಯಲ್ಲಿ ಸದರ್ನ್ ಕಮಾಂಡ್ ತಂಡವು2–1ರಿಂದ ಕೆನರಾ ಬ್ಯಾಂಕ್ ಎದುರು ಗೆದ್ದಿತು.

ಸಾಯ್ ಹಾಗೂ ಎಂಇಜಿ ತಂಡಗಳ ನಡುವಿನ ಪಂದ್ಯ 2–2 ಗೋಲುಗಳಿಂದ ಸಮಬಲ ಕಂಡಿತ್ತು. ಆದರೆ ಶೂಟೌ ಟ್ನಲ್ಲಿ ಸಾಯ್ 4–3ರಿಂದ ಜಯ ಒಲಿಸಿಕೊಂಡಿತು.

ಸದರ್ನ್ ಕಮಾಂಡ್ ಪರ 11ನೇ ನಿಮಿಷದಲ್ಲೇ ಅಜಿತ್ ಶಿಂಧೆ ಗೋಲು ದಾಖಲಿಸಿದರು. ಕೆನರಾ ಬ್ಯಾಂಕ್ನ ಕೆ.ಎಂ.ಸೋಮಣ್ಣ 19ನೇ ನಿಮಿಷದಲ್ಲಿ ಕಾಲ್ಚಳಕ ತೋರಿ ಸಮಬಲಕ್ಕೆ ಕಾರಣ ವಾದರು. 55ನೇ ನಿಮಿಷದಲ್ಲಿ ಯಶಸ್ಸು ಕಂಡ ಎಂ.ಎಸ್. ಬೋಪಣ್ಣ ಕಮಾಂಡ್ನ ಜಯ ಖಚಿತಪಡಿಸಿದರು.

ಸಾಯ್ ಪರ ವೀರಣ್ಣ ಗೌಡ (13ನೇ ನಿಮಿಷ) ಹಾಗೂ ಮೊಹಮ್ಮದ್ ರಾಹೀಲ್ (41ನೇ ನಿಮಿಷ) ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು. ಎಂಇಜಿ ತಂಡದ ಕುಂಜಪ್ಪ (13ನೇ ನಿ.) ಮತ್ತು ಮಂಜೀತ್ (27ನೇ ನಿ.) ಗೋಲು ಗಳಿಸಿದರು. ಶೂಟೌಟ್ನಲ್ಲಿ ಸಾಯ್ ತಂಡದ ವೀರಣ್ಣ ಗೌಡ, ಡಿ.ಎಂ. ಅಚ್ಚಯ್ಯ, ಹರೀಶ್ ಮುಟಗಾರ್, ಬಿ.ಎಂ.ಲಿಖಿತ್ ಯಶಸ್ಸು ಸಾಧಿಸಿದರು. ಎಂಇಜಿ ತಂಡದ ರಜಂತ್, ಕುಂಜಪ್ಪ, ಸುರಸ್ ಸಿಂಗ್ ಗೋಲು ಹೊಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.