ಚೆನ್ನೈ: ಜುಲೈನಲ್ಲಿ ಇಲ್ಲಿ ನಡೆಯಲಿರುವ 44ನೇ ಚೆಸ್ ಒಲಿಂಪಿಯಾಡ್‌ಗೆ 187 ದೇಶಗಳಿಂದ ದಾಖಲೆಯ 343 ತಂಡಗಳು ನೋಂದಾಯಿಸಿಕೊಂಡಿವೆ.

ಜುಲೈ 28ರಿಂದ ಆಗಸ್ಟ್ 10ರವರೆಗೆ ವಿಶ್ವಮಟ್ಟದ ಟೂರ್ನಿ ನಿಗದಿಯಾಗಿದ್ದು, ಮುಕ್ತ ಮತ್ತು ಮಹಿಳಾ ವಿಭಾಗದಲ್ಲಿ ತಂಡಗಳು ಸೆಣಸಲಿವೆ.

ವಿಶ್ವ ಚಾಂಪಿಯನ್, ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಟೂರ್ನಿಯ ಪ್ರಮುಖ ಆಕರ್ಷಣೆಯಾಗಲಿದ್ದಾರೆ.

‘187 ದೇಶಗಳಿಂದ ಮುಕ್ತ ವಿಭಾಗದಲ್ಲಿ 189 ತಂಡಗಳು ಮತ್ತು ಮಹಿಳಾ ವಿಭಾಗದಲ್ಲಿ 154 ತಂಡಗಳು ನೋಂದಾಯಿಸಿಕೊಂಡಿವೆ‘ ಎಂದು ಅಖಿಲ ಭಾರತ ಚೆಸ್ ಫೆಡರೇಷನ್ (ಎಐಸಿಎಫ್) ಕಾರ್ಯದರ್ಶಿ ಮತ್ತು ಟೂರ್ನಿಯ ನಿರ್ದೇಶಕ ಭರತ್ ಸಿಂಗ್ ಚೌಹಾನ್ ಹೇಳಿದ್ದಾರೆ.

2018ರಲ್ಲಿ ಜಾರ್ಜಿಯಾದ ಬಾತುಮಿಯಲ್ಲಿ ಕನಡೆದ ಕಳೆದ ಬಾರಿಯ ಒಲಿಂಪಿಯಾಡ್‌ನಲ್ಲಿ 179 ದೇಶಗಳಿಂದ ಮುಕ್ತ ಮತ್ತು ಮಹಿಳಾ ವಿಭಾಗಗಳಲ್ಲಿ ಕ್ರಮವಾಗಿ 184 ಮತ್ತು 150 ತಂಡಗಳು ನೋಂದಣಿ ಮಾಡಿಕೊಂಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.