ಲಾಸ್ ಏಂಜಲೀಸ್: ಕೊರೊನಾ ಹಾವಳಿಯಿಂದ ತತ್ತರಿಸಿರುವ ಅಮೆರಿಕದಲ್ಲಿ ಮೇ ತಿಂಗಳ ಮಧ್ಯದಲ್ಲಿ ಹಾಕಿ ತರಬೇತಿ ಸೌಲಭ್ಯಗಳನ್ನು ತೆರೆಯುವ ಚಿಂತನೆ ಇದೆ ಎಂದು ರಾಷ್ಟ್ರೀಯ ಹಾಕಿ ಲೀಗ್ ಮೂಲಗಳು ತಿಳಿಸಿವೆ.

‘ಮನೆಯಲ್ಲೆ ಉಳಿದುಕೊಳ್ಳುವ ಮತ್ತು ಅಂತರ ಕಾಯ್ದುಕೊಳ್ಳುವ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಲೇ ತರಬೇತಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಮೇ ಮಧ್ಯದ ನಂತರ ಅಥವಾ ಕೊನೆಯಲ್ಲಿ ಇದು ಜಾರಿಗೆ ಬರುವ ಸಾಧ್ಯತೆ ಇದೆ. ಕೆಲವೇ ಆಟಗಾರರು ಒಂದೆಡೆ ಸೇರಿ ದೈಹಿಕ ಕಸರತ್ತು ಮತ್ತು ಸ್ವಲ್ಪ ಹೊತ್ತಿನ ಅಭ್ಯಾಸ ಮಾಡಲಿದ್ದಾರೆ’ ಎಂದು ಎನ್ಎಚ್ಎಲ್ನ ’ಅಂಗಣಕ್ಕೆ ವಾಪಸಾಗು’ ಸಮಿತಿಯ ಸಭೆಯ ನಂತರ ಪ್ರತಿನಿಧಿಯೊಬ್ಬರು ವಿವರಿಸಿದರು. ಆಟಗಾರರ ಸಂಘಟನೆ ಮತ್ತು ಕ್ಲಬ್ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು.

ದೇಶದಲ್ಲಿ ಕೊರೊನಾ ಸೋಂಕು ಹರಡುತ್ತಿದ್ದಂತೆ ರಾಷ್ಟ್ರೀಯ ಹಾಕಿ ಲೀಗ್ ಮಾರ್ಚ್ 12ರಂದು ಸ್ಥಗಿತಗೊಂಡಿತ್ತು. ಈ ಸಂದರ್ಭದಲ್ಲಿ ಕ್ಲಬ್ಗಳು ಮೂರು ಕ್ವಾರ್ಟರ್ಗಳನ್ನು ಆಡಿದ್ದವು. ಒಟ್ಟು 82 ಪಂದ್ಯಗಳು ನಡೆಯಬೇಕಾಗಿದ್ದವು. ಲೀಗ್ ಏಪ್ರಿಲ್ ನಾಲ್ಕರಂದು ಮುಕ್ತಾಯಗೊಳ್ಳಬೇಕಾಗಿತ್ತು.

ಒಟ್ಟಾವ ಸೆನಟರ್ಸ್ ತಂಡದ ಐವರು ಒಳಗೊಂಡಂತೆ ಒಟ್ಟು ಎಂಟು ಮಂದಿ ಎನ್ಎಚ್ಎಲ್ ಆಟಗಾರರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.