ಸ್ಟಾಕ್‌ಹೋಮ್: ತಮಿಳುನಾಡಿನ ಪ್ರಾಣೇಶ್ ಅವರು ಭಾರತದ 79ನೇ ಚೆಸ್ ಗ್ರ್ಯಾಂಡ್‌ಮಾಸ್ಟರ್ ಎನಿಸಿಕೊಂಡರು. 16 ವರ್ಷದ ಅವರು ಇಲ್ಲಿ ನಡೆದ ರಿಲ್ಟನ್ ಕಪ್ ಟೂರ್ನಿ ಗೆದ್ದು ಈ ಸಾಧನೆ ಮಾಡಿದರು.

ಜಿಎಂ ಪಟ್ಟಕ್ಕೆ ಅಗತ್ಯವಿದ್ದ 2,500 ಎಲೊ ಪಾಯಿಂಟ್ಸ್ ಗಡಿ ತಲುಪಲು ಅವರು ಯಶಸ್ವಿಯಾದರು. ಚೆಸ್‌ನಲ್ಲಿ ಗ್ರ್ಯಾಂಡ್‌ಮಾಸ್ಟರ್ ಪಟ್ಟ ಲಭಿಸಬೇಕಾದರೆ, ಮೂರು ಜಿಎಂ ನಾರ್ಮ್‌ಗಳನ್ನು ಪಡೆಯುವ ಜತೆಯಲ್ಲೇ 2,500 ಎಲೊ ಪಾಯಿಂಟ್ಸ್ ಹೊಂದಬೇಕು.

ಇಲ್ಲಿ 22ನೇ ಶ್ರೇಯಾಂಕ ಹೊಂದಿದ್ದ ಪ್ರಾಣೇಶ್, ಎಂಟು ಸುತ್ತುಗಳಲ್ಲಿ ಗೆಲುವು ಪಡೆದು ಎಂಟು ಪಾಯಿಂಟ್ಸ್ ಸಂಗ್ರಹಿಸಿದರು. ಎರಡನೇ ಸ್ಥಾನ ಪಡೆದ ಸ್ವೀಡನ್‌ನ ಕಾನ್ ಕುಸುಕ್ಸರಿ ಮತ್ತು ಲಾತ್ವಿಯದ ನಿಕಿತ ಮೆಶ್ಕೊವ್ಸ್ ಅವರಿಗಿಂತ ಪೂರ್ಣ ಒಂದು ಪಾಯಿಂಟ್ಸ್ ಮುನ್ನಡೆ ಗಳಿಸಿದರು.

ಈ ಟೂರ್ನಿಯಲ್ಲಿ 29 ರಾಷ್ಟ್ರಗಳ 136 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಕಣದಲ್ಲಿದ್ದ ಭಾರತದ ಇನ್ನೊಬ್ಬ ಸ್ಪರ್ಧಿ ಆರ್.ರಾಜಾ ರಿತ್ವಿಕ್ ಆರು ಪಾಯಿಂಟ್ಸ್‌ಗಳೊಂದಿಗೆ ಎಂಟನೇ ಸ್ಥಾನ ಪಡೆದರು.

19 ವರ್ಷದ ಕೌಸ್ತವ್ ಚಟರ್ಜಿ ಅವರು ಈಚೆಗೆ ಭಾರತದ 78ನೇ ಗ್ರ್ಯಾಂಡ್‌ಮಾಸ್ಟರ್ ಗೌರವ ತಮ್ಮದಾಗಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.