ಗ್ರೇಟರ್ ನೊಯ್ಡಾ: ‘ಸುಲ್ತಾನ್’ ಫಜಲ್ ಅಟ್ರಾಚಲಿ ಅವರ ಉತ್ತಮ ರಕ್ಷಣಾ ಕೌಶಲದಿಂದ ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್ ಏಳನೇ ಆವೃತ್ತಿಯ ಪಂದ್ಯದಲ್ಲಿ ಗುರುವಾರ ಹರಿಯಾಣ ಸ್ಟೀಲರ್ಸ್ ತಂಡವನ್ನು 39–33 ಪಾಯಿಂಟ್ಗಳಿಂದ ಸೋಲಿಸಿತು.

ಶಹೀದ್ ವಿಜಯ್ ಸಿಂಗ್ ಪಥಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ನಡೆದ ಉತ್ತಮ ಹೋರಾಟದ ಪಂದ್ಯದಲ್ಲಿ ಇರಾನ್ ಆಟಗಾರನಾಗಿರುವ ಫಜಲ್ ಒಟ್ಟು ಎಂಟು ಟ್ಯಾಕಲ್ ಪಾಯಿಂಟ್ಗಳನ್ನು ಗಳಿಸಿದರು. ಅವರಿಗೆ ಇನ್ನೊಬ್ಬ ಕಾರ್ನರ್ ಆಟಗಾರ ಸಂದೀಪ್ ನರ್ವಾಲ್ (5 ಪಾಯಿಂಟ್ಸ್) ಉತ್ತಮ ಬೆಂಬಲ ನೀಡಿದರು.

ಲೀಗ್ನಲ್ಲಿ ಬಹುತೇಕ ಮೀಸಲು ಆಟಗಾರನಾಗಿಯೇ ಇದ್ದ ಅಜಿಂಕ್ಯ ಕಪ್ರೆ ಉತ್ತಮ ರೇಡಿಂಗ್ ಪ್ರದರ್ಶಿಸಿ 9 ಪಾಯಿಂಟ್ಸ್ ಗಳಿಸಿದರು. ಅಜಿಂಕ್ಯ, ಫ್ಯೂಚರ್ ಕಬಡ್ಡಿ ಹೀರೋಸ್ ಯೋಜನೆ ಯಿಂದ ಬೆಳಕಿಗೆ ಬಂದವರು.

ಸ್ಟೀಲರ್ಸ್ ಪರ ವಿನಯ್ ಐದು ಬೋನಸ್ ಸೇರಿ 11 ರೇಡ್ ಪಾಯಿಂಟ್ಸ್ ಗಳಿಸಿದರು. ಅನುಭವಿ ವಿಕಾಸ್ ಖಂಡೋಲಾ ಆರು ಪಾಯಿಂಟ್ಸ್ ಕಲೆಹಾಕಿದರು.

ಪೂರ್ವಾರ್ಧ ಉತ್ತಮ ಹೋರಾಟ ದಿಂದ ಕೂಡಿತ್ತು. ರೇಡಿಂಗ್ ವಿಭಾಗ ಒಂದಿಷ್ಟು ದುರ್ಬಲವಾದಂತೆ ಕಂಡರೂ ಮುಂಬಾ ತಂಡದ ರಕ್ಷಣಾ ವಿಭಾಗ ಅದನ್ನು ಸರಿದೂಗಿಸಿತು.

ಅಟ್ರಾಚಲಿ, ಸಂದೀಪ್ ಇಬ್ಬರೂ ಪ್ರೊ ಕಬಡ್ಡಿಯಲ್ಲಿ 300 ಟ್ಯಾಕಲ್ ಪಾಯಿಂಟ್ಸ್ ಪೂರೈಸಿದರು. ಇನ್ನೊಂ ದೆಡೆ ಸ್ಟೀಲರ್ಸ್ ರಕ್ಷಣಾ ವಿಭಾಗ ಕೂಡ ಪ್ರಬಲವಾಗಿಯೇ ಕಂಡಿತು. ಹೀಗಾಗಿ ವಿರಾಮದ ವೇಳೆ ಸ್ಕೋರ್ 15–15ರಲ್ಲಿ ಸಮಬಲಗೊಂಡಿತ್ತು.

ಉತ್ತರಾರ್ಧ ಪೈಪೋಟಿಯಿಂದ ಕೂಡಿತ್ತು. ಆದರೆ ಕೊನೆಯ ಕೆಲವು ನಿಮಿಷಗಳಿದ್ದಾಗ ನಾಲ್ಕು ಪಾಯಿಂಟ್ ಗಳ ಮುನ್ನಡೆ ಪಡೆದ ಮುಂಬಾ ಆ ಮುನ್ನಡೆಯನ್ನು ಇನ್ನಷ್ಟು ಬೆಳೆಸಿತು.

ಶುಕ್ರವಾರದ ಪಂದ್ಯಗಳು: ದಬಂಗ್ ಡೆಲ್ಲಿ– ಯು ಮುಂಬಾ (ರಾತ್ರಿ 7.30); ಯು.ಪಿ. ಯೋಧಾ– ಬೆಂಗಳೂರು ಬುಲ್ಸ್ (8.30).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.