ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ರೋಯಿಂಗ್ ಕ್ರೀಡೆಯಲ್ಲಿ ಭಾರತ ಏಕೈಕ ಸ್ಪರ್ಧಿಯಾಗಿರುವ ಬಲರಾಜ್ ಪನ್ವರ್ ಅವರು ಮಂಗಳವಾರ ನಡೆದ ಪುರುಷರ ಸಿಂಗಲ್ ಸ್ಕಲ್ ಕ್ವಾರ್ಟರ್ ಫೈನಲ್ ಹೀಟ್ ರೇಸ್ನಲ್ಲಿ ಐದನೇ ಸ್ಥಾನ ಪಡೆದರು.

ಕ್ವಾರ್ಟರ್ಫೈನಲ್ನ ಹೀಟ್–4ರಲ್ಲಿ ಪನ್ವರ್ ಅವರು 7 ನಿಮಿಷ 5.10 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಆದರೆ ಸೆಮಿಫೈನಲ್ ‘ಸಿ/ಡಿ’ಗೇರುವಲ್ಲಿ ವಿಫಲರಾದರು. 13ರಿಂದ 24ನೇ ಸ್ಥಾನಗಳಿಗಾಗಿ ಸ್ಪರ್ಧಿಸಲಿದ್ದಾರೆ.

ತಟಸ್ಥವಾಗಿ ಸ್ಪರ್ಧಿಸಿರುವ ಯೂಹೆನಿ ಜಲಾಟಿ ಅವರು ಕ್ವಾರ್ಟರ್ಫೈನಲ್ನ ಹೀಟ್–4ರಲ್ಲಿ 6 ನಿಮಿಷ 49.27 ಸೆಕೆಂಡುಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಲಿಥುವೇನಿಯಾದ ಗಿಡ್ರಿಯಸ್ ಬಿಲಿಯಾಸ್ಕಸ್ (6ನಿ 51.80ಸೆ) ಮತ್ತು ಜಪಾನ್ನ ಯುಟಾ ಅರಕಾವಾ (6ನಿ 54.17ಸೆ) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದರು.

ಪನ್ವರ್ ಅವರು ಭಾನುವಾರ ನಡೆದಿದ್ದ ರೆಪೆಷಾಜ್ನಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಕ್ವಾರ್ಟರ್ಫೈನಲ್ ತಲುಪಿದ್ದರು. ಶನಿವಾರ ನಡೆದಿದ್ದ ಮೊದಲ ಸುತ್ತಿನ ಹೀಟ್ನಲ್ಲಿ ಪನ್ವರ್ ನಾಲ್ಕನೇ ಸ್ಥಾನದಲ್ಲಿ ಗುರಿ ತಲುಪಿ ರೆಪೆಷಾಜ್ಗೆ ಅರ್ಹತೆ ಪಡೆದಿದ್ದರು.

ನಾಲ್ಕು ಕ್ವಾರ್ಟರ್ಫೈನಲ್ಸ್ ಹೀಟ್ಸ್ಗಳಲ್ಲಿ ಮೊದಲ ಮೂರು ಸ್ಥಾನ ಪಡೆದವರು ಸೆಮಿಫೈನಲ್ಸ್ ‘ಎ/ಬಿ’ಗೆ ಅರ್ಹತೆ ಪಡೆಯುತ್ತಾರೆ. ಉಳಿದವರು ಸೆಮಿಫೈನಲ್ ‘ಸಿ/ಡಿ’ನಲ್ಲಿ ಸ್ಪರ್ಧಿಸುತ್ತಾರೆ. ಸೆಮಿಫೈನಲ್ ‘ಎ/ಬಿ’ನಲ್ಲಿ ಇದ್ದವರು ಫೈನಲ್ ಎ/ಬಿನಲ್ಲಿ ಸ್ಪರ್ಧಿಸುತ್ತಾರೆ. ಫೈನಲ್ ‘ಎ’ನಲ್ಲಿ ಅಗ್ರಸ್ಥಾನ ಪಡೆಯುವ ಮೂವರಿಗೆ ಪದಕ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.