ಬೆಂಗಳೂರು: ಕರ್ನಾಟಕದ ನತಾಶಾ ಚೇತನ್ ಅವರು ಚೆನ್ನೈನಲ್ಲಿ ನಡೆಯುತ್ತಿರುವ 90ನೇ ರಾಷ್ಟ್ರೀಯ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಸಬ್ ಜೂನಿಯರ್ ಬಾಲಕಿಯರ ಸ್ನೂಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಫೈನಲ್‌ನಲ್ಲಿ ನತಾಶಾ ಅವರು ಗುಜರಾತ್‌ನ ಅನ್ಯಾ ಪಟೇಲ್ ಅವರನ್ನು 3-1 (35-57, 57-43, 55-42, 41-29) ಪರಾಭವಗೊಳಿಸಿದರು.

ಕಳೆದ ವಾರ ಸಬ್ ಜೂನಿಯರ್ ಬಾಲಕಿಯರ ಬಿಲಿಯರ್ಡ್ಸ್ ಪ್ರಶಸ್ತಿಗೆ ನಡೆದ ಅಂತಿಮ ಸುತ್ತಿನಲ್ಲೂ ಇವರಿಬ್ಬರೂ ಮುಖಾಮುಖಿಯಾಗಿದ್ದು, ನತಾಶಾ ಜಯ ಸಾಧಿಸಿದ್ದರು.

ಅವರು ಕಳೆದ ಜುಲೈನಲ್ಲಿ ರಿಯಾದ್‌ನಲ್ಲಿ ನಡೆದಿದ್ದ ಐಬಿಎಸ್‌ಎಫ್ ಮಹಿಳೆಯರ 21 ವರ್ಷದೊಳಗಿನವರ ವಿಶ್ವ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.