ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ರೋಯಿಂಗ್ ಫೈನಲ್ ರೇಸ್ನಿಂದ ಆಗಲೇ ಹೊರಬಿದ್ದಿರುವ ಭಾರತದ ಸ್ಪರ್ಧಿಗಳಾದ ಅರ್ಜುನ್ ಲಾಲ್ ಜಾಟ್ ಹಾಗೂ ಅರವಿಂದ್ ಸಿಂಗ್ ಜೋಡಿಯು, 11ನೇ ಸ್ಥಾನ ಪಡೆಯಿತು.

ಹಾಗಿದ್ದರೂ ಒಲಿಂಪಿಕ್ಸ್ ರೋಯಿಂಗ್ ಇತಿಹಾಸದಲ್ಲಿ ಭಾರತದಿಂದ ದಾಖಲಾದ ಅತ್ಯುತ್ತಮ ಸಾಧನೆ ಇದಾಗಿದೆ. ಈ ಮೂಲಕ ಭಾರತದ ಸ್ಪರ್ಧಿಗಳು ಛಾಪು ಮೂಡಿಸಿದ್ದಾರೆ.

ಇದನ್ನೂ ಓದಿ:Tokyo Olympics: ಫೈನಲ್ ಪ್ರವೇಶವಿಲ್ಲದಿದ್ದರೂ ರೋಯಿಂಗ್ ‘ಯೋಧರ’ ಶ್ರೇಷ್ಠ ಸಾಧನೆ

ಪುರುಷರ ಲೈಟ್ವೇಟ್ ಡಬಲ್ ಸ್ಕಲ್ಸ್ವಿಭಾಗದಲ್ಲಿ ಸ್ಪರ್ಧಿಸಿದ ಭಾರತ ಜೋಡಿಯು 6 ನಿಮಿಷ 29.66 ಸೆಕೆಂಡುಗಳಲ್ಲಿ ಗುರಿ ತಲುಪಿತು. ಅಲ್ಲದೆ ದೇಶದ ಪರ ಶ್ರೇಷ್ಠ ಸಾಧನೆ ಮಾಡಿದ ಹಿರಿಮೆಗೆ ಪಾತ್ರರಾಗಿದ್ದಾರೆ.

ಸೀ ಫಾರೆಸ್ಟ್ ವಾಟರ್ವೇನಲ್ಲಿ ನಡೆದ ಸ್ಪರ್ಧೆಯಲ್ಲಿ ಐರ್ಲೆಂಡ್, ಜರ್ಮನಿ ಹಾಗೂ ಇಟಲಿಯ ಸ್ಪರ್ಧಿಗಳು ಕ್ರಮವಾಗಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.