ನವದೆಹಲಿ: ಕೋವಿಡ್–19ರಿಂದ ತೊಂದರೆ ಎದುರಿಸುತ್ತಿರುವ ಹಾಲಿ, ಮಾಜಿ ಆಟಗಾರರು ಹಾಗೂ ಕೋಚ್ಗಳಿಗೆ ಧನಸಹಾಯ ಒದಗಿಸುವುದಾಗಿ ಭಾರತ ಟೇಬಲ್ ಟೆನಿಸ್ ಫೆಡರೇಷನ್ (ಟಿಟಿಎಫ್ಐ) ಪ್ರಕಟಿಸಿದೆ.

ಈ ವಾರದ ಆರಂಭದಲ್ಲಿ ನಡೆದ ಟಿಟಿಎಫ್ಐನ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

‘ಕೋವಿಡ್ನಿಂದ ಸಮಸ್ಯೆ ಎದುರಿಸುತ್ತಿರುವ ಭಾರತದ ಆಟಗಾರರಿಗೆ (ಅಗ್ರ 16ರೊಳಗಿನ ರ್ಯಾಂಕ್) ನಾವು ನೆರವಾಗಲಿದ್ದೇವೆ. ಆಕ್ಸಿಜನ್ ನೆರವಿನಲ್ಲಿರುವ ರೋಗಿಗೆ ₹ 1ಲಕ್ಷ, ಗಂಭೀರ ಸ್ಥಿತಿಯಲ್ಲಿರುವವರಿಗೆ ₹ 2 ಲಕ್ಷ ಹಾಗೂ ಸಾವು ಸಂಭವಿಸಿದ್ದಲ್ಲಿ ಅವರ ಕುಟುಂಬದವರಿಗೆ ₹ 3 ಲಕ್ಷ ನೀಡಲಿದ್ದೇವೆ‘ ಎಂದು ಟಿಟಿಎಫ್ಐ ಸಲಹೆಗಾರ ಹಾಗೂ ಮಾಜಿ ಕಾರ್ಯದರ್ಶಿ ಎಂ.ಪಿ.ಸಿಂಗ್ ತಿಳಿಸಿದ್ದಾರೆ.

‘ರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡಿರುವ ಎಲ್ಲ ಕೋಚ್ಗಳಿಗೂ ಈ ಸೌಲಭ್ಯ ದೊರೆಯಲಿದೆ. ಇದು ಸಂಕಷ್ಟದ ಸಮಯ. ಸಮಸ್ಯೆಯಿಂದ ಬಳಲುತ್ತಿರುವವರಿಗೆ ನಾವು ಒದಗಿಸುವ ಕನಿಷ್ಠ ನೆರವು ಇದು‘ ಎಂದೂ ಅವರು ನುಡಿದರು.

ಕಳೆದ ಎರಡೂ ತಿಂಗಳುಗಳಲ್ಲಿ ಇಬ್ಬರು ಮಾಜಿ ಆಟಗಾರರು ಕೋವಿಡ್ನಿಂದ ಮೃತಪಟ್ಟಿದ್ದಾರೆ. ಸುಹಾಸ್ ಕುಲಕರ್ಣಿ (68) ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃ ವಿ.ಚಂದ್ರಶೇಖರ್ ಸೋಂಕಿನಿಂದಾಗಿ ನಿಧನರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.