ಮಿಯಾಮಿ: ಗೆಲುವಿನ ಓಟ ಮುಂದುವರಿಸಿರುವ ಸ್ವಿಟ್ಜರ್ಲೆಂಡ್ನ ರೋಜರ್ ಫೆಡರರ್, ಮಿಯಾಮಿ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಫೆಡರರ್ 6–0, 6–4 ನೇರ ಸೆಟ್ಗಳಿಂದ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ಅವರನ್ನು ಪರಾಭವಗೊಳಿಸಿದರು.

ಗ್ರ್ಯಾನ್ಸ್ಲಾಮ್ನಲ್ಲಿ 20 ಪ್ರಶಸ್ತಿಗಳನ್ನು ಗೆದ್ದು ದಾಖಲೆ ನಿರ್ಮಿಸಿರುವ ರೋಜರ್, ಮೊದಲ ಸೆಟ್ನಲ್ಲಿ ಅಬ್ಬರಿಸಿದರು. ಶರವೇಗದ ಸರ್ವ್ ಮತ್ತು ಮಿಂಚಿನ ರಿಟರ್ನ್ಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು. ತಾವು ಮಾಡಿದ ಎಲ್ಲಾ ಸರ್ವ್ಗಳನ್ನೂ ಉಳಿಸಿಕೊಂಡ ಸ್ವಿಟ್ಜರ್ಲೆಂಡ್ನ ಆಟಗಾರ, ಕೆವಿನ್ ಅವರ ಮೂರೂ ಸರ್ವ್ಗಳನ್ನು ಮುರಿದು ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿದರು.

37 ವರ್ಷ ವಯಸ್ಸಿನ ಫೆಡರರ್ಗೆ ಎರಡನೇ ಸೆಟ್ನಲ್ಲಿ ಪ್ರಬಲ ಪೈಪೋಟಿ ಎದುರಾಯಿತು. ಉಭಯ ಆಟಗಾರರು ಆರಂಭದ ಆರು ಗೇಮ್ಗಳಲ್ಲಿ ಸರ್ವ್ ಕಾಪಾಡಿಕೊಂಡರು. ಟೂರ್ನಿಯಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ರೋಜರ್, ನಂತರ ಮಿಂಚಿದರು. ಬೇಸ್ಲೈನ್ ಮತ್ತು ಗ್ರೌಂಡ್ಸ್ಟ್ರೋಕ್ ಹೊಡೆತಗಳ ಮೂಲಕ ಗೇಮ್ಗಳನ್ನು ಗೆದ್ದು ಸಂಭ್ರಮಿಸಿದರು.

ನಾಲ್ಕರ ಘಟ್ಟದ ಪೈಪೋಟಿಯಲ್ಲಿ ಫೆಡರರ್, ಕೆನಡಾದ ಡೆನಿಶ್ ಶಪೊವಲೊವ್ ಎದುರು ಸೆಣಸಲಿದ್ದಾರೆ.ಇನ್ನೊಂದು ಕ್ವಾರ್ಟರ್ ಫೈನಲ್ನಲ್ಲಿ ಶಪೊವಲೊವ್ 6–7, 6–4, 6–2ರಲ್ಲಿ ಅಮೆರಿಕದ ಫ್ರಾನ್ಸೆಸ್ ತಿಯಾಫೊ ಅವರನ್ನು ಸೋಲಿಸಿದರು.

ಫೆಡರರ್ ಮತ್ತು ಶಪೊವಲೊವ್ ಮೊದಲ ಸಲ ಮುಖಾಮುಖಿಯಾಗುತ್ತಿದ್ದಾರೆ. ಹೀಗಾಗಿ ಅಭಿಮಾನಿಗಳಲ್ಲಿ ಕುತೂಹಲ ಗರಿಗೆದರಿದೆ.

ಫೈನಲ್ಗೆ ಪ್ಲಿಸ್ಕೋವಾ: ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಜೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ಫೈನಲ್ ಪ್ರವೇಶಿಸಿದರು.

ಸೆಮಿಫೈನಲ್ನಲ್ಲಿ ಐದನೇ ಶ್ರೇಯಾಂಕದ ಆಟಗಾರ್ತಿ ಪ್ಲಿಸ್ಕೋವಾ 7–5, 6–1 ನೇರ ಸೆಟ್ಗಳಿಂದ ರುಮೇನಿಯಾದ ಎರಡನೇ ಶ್ರೇಯಾಂಕದ ಆಟಗಾರ್ತಿ ಸಿಮೊನಾ ಹಲೆಪ್ಗೆ ಆಘಾತ ನೀಡಿದರು.

ನಾಲ್ಕರ ಘಟ್ಟದ ಇನ್ನೊಂದು ಹೋರಾಟದಲ್ಲಿ ಆಸ್ಟ್ರೇಲಿಯಾದ ಆ್ಯಷ್ಲೆ ಬಾರ್ಟಿ 6–3, 6–3ರಲ್ಲಿ ಅನೆಟ್ ಕೊಂಥಾವೀಟ್ ಎದುರು ವಿಜಯಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.