ಪ್ಯಾರಿಸ್: ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಬಹುಮಾನ ಮೊತ್ತವನ್ನು ಸಂಘಟಕರು ಹೆಚ್ಚಿಸಿದ್ದು, ಈ ಬಾರಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದ ಚಾಂಪಿಯನ್ನರು ತಲಾ ₹ 20.60 ಕೋಟಿ ಪಡೆಯಲಿದ್ದಾರೆ.

‘ಈ ಬಾರಿಯ ಟೂರ್ನಿಯು ಒಟ್ಟು ₹ 444 ಕೋಟಿ ಬಹುಮಾನ ಮೊತ್ತ ಒಳಗೊಂಡಿರಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಬಹುಮಾನ ಮೊತ್ತವನ್ನು ಶೇ 12.3 ಹೆಚ್ಚಿಸಲಾಗಿದೆ’ ಎಂದು ಸಂಘಟಕರು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.

2022ರ ಟೂರ್ನಿಯ ಸಿಂಗಲ್ಸ್ ವಿಭಾಗದ ಚಾಂಪಿಯನ್ನರು ₹ 19.69 ಕೋಟಿ ನಗದು ಬಹುಮಾನ ಪಡೆದುಕೊಂಡಿದ್ದರು.

‘ಸಿಂಗಲ್ಸ್ ವಿಭಾಗದ ಒಟ್ಟು ಬಹುಮಾನ ಮೊತ್ತವನ್ನು ಕಳೆದ ಬಾರಿಗಿಂತ ಶೇ 9.1 ಹೆಚ್ಚಿಸಲಾಗಿದೆ. ಮೊದಲ ಮೂರು ಸುತ್ತುಗಳಲ್ಲಿ ಸೋಲು ಅನುಭವಿಸುವ ಆಟಗಾರರು ಪಡೆಯುವ ಮೊತ್ತ ಈ ವರ್ಷ ಶೇ 11 ರಿಂದ 13 ಏರಿಕೆಯಾಗಿದೆ’ ಎಂದಿದ್ದಾರೆ.

ಕಳೆದ ವರ್ಷದ ಟೂರ್ನಿಯಲ್ಲಿ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಸೋತಿದ್ದ ಆಟಗಾರರು ₹ 55 ಲಕ್ಷ ನಗದು ಬಹುಮಾನ ಗಳಿಸಿದ್ದರು.

ಫ್ರೆಂಚ್ ಓಪನ್ ಟೂರ್ನಿ ಮೇ 28 ರಿಂದ ಜೂನ್ 11ರ ವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.