ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಫ್ರೆಂಚ್‌ ಓಪನ್: ಶ್ವಾಂಟೆಕ್‌ಗೆ ಸತತ ಮೂರನೇ ಕಿರೀಟ

ಜಾಸ್ಮಿನ್ ಪಾವ್ಲೋನಿ ವಿರುದ್ಧ ನೇರ ಸೆಟ್‌ಗಳ ಗೆಲುವು
Published : 8 ಜೂನ್ 2024, 23:33 IST
Last Updated : 8 ಜೂನ್ 2024, 23:33 IST
ಫಾಲೋ ಮಾಡಿ
Comments
ಫೈನಲ್‌ಗೆ ಅಲ್ಕರಾಜ್‌– ಜ್ವರೇವ್ ಪ್ಯಾರಿಸ್
ಸ್ಪೇನ್‌ನ ಕಾರ್ಲೋಸ್‌ ಅಲ್ಕರಾಜ್ ಮತ್ತು ಜರ್ಮನಿಯ ಅಲೆಕ್ಸಾಂಡರ್‌ ಜ್ವರೇವ್‌ ಅವರಿ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಪ್ರಶಸ್ತಿಗಾಗಿ ಭಾನುವಾರ ಫೈನಲ್‌ನಲ್ಲಿ ಮುಖಾಮುಖಿ ಆಗಲಿದ್ದಾರೆ. ಎರಡು ಗ್ರ್ಯಾನ್‌ಸ್ಲ್ಯಾಮ್ ಟೂರ್ನಿ ಜಯಿಸಿರುವ ಮೂರನೇ ಶ್ರೇಯಾಂಕದ ಅಲ್ಕರಾಜ್‌ ಮೂರನೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ನಾಲ್ಕನೇ ಶ್ರೇಯಾಂಕದ ಜ್ವರೇವ್‌ ಅವರು ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದ್ದಾರೆ.  ತಡರಾತ್ರಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಅಲೆಕ್ಸಾಂಡರ್‌ ಜ್ವರೇವ್ ಹಿನ್ನಡೆಯಿಂದ ಚೇತರಿಸಿಕೊಂಡು 2–6 6–2 6–4 6–2 ಅವರು ನಾರ್ವೆಯ ಕ್ಯಾಸ್ಪರ್‌ ರುಡ್‌ ಅವರನ್ನು ಸೋಲಿಸಿದರು.  21 ವರ್ಷದ ಅಲ್ಕರಾಜ್ ಅವರು ಮೊದಲ ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಯಾನಿಕ್ ಸಿನ್ನರ್ ಅವರನ್ನು 2–6 6–3 6–4 6–3ರಿಂದ ಮಣಿಸಿದ್ದರು. 2022ರಲ್ಲಿ ಅಮೆರಿಕ್ ಓಪನ್ ಮತ್ತು 2023 ರಲ್ಲಿ ವಿಂಬಲ್ಡನ್‌ ಪ್ರಶಸ್ತಿ ಗೆದ್ದಿರುವ ಅಲ್ಕರಾಜ್ ಈಗ ಪ್ಯಾರಿಸ್‌ನ ಕೆಂಪು ಜೇಡಿಮಣ್ಣಿನ ಮೇಲೆ ಟ್ರೋಫಿ ಎತ್ತಿ ಹಿಡಿಯಲು ಒಂದು ಹೆಜ್ಜೆಯಷ್ಟೇ ದೂರದಲ್ಲಿದ್ದಾರೆ. ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಜ್ಜರೇವ್ ಚೊಚ್ಚಲ ಪ್ರಶಸ್ತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. 2020ರ ಅಮೆರಿಕ ಓಪನ್‌ನಲ್ಲಿ ಅವರು ರನ್ನರ್ ಅಪ್ ಆಗಿದ್ದರು. ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಅವರು ಇಲ್ಲಿ 13 ಪ್ರಶಸ್ತಿ ಗೆದ್ದಿರುವ ರಫೆಲ್ ನಡಾಲ್ ಅವರನ್ನು ಮಣಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT