ನವದೆಹಲಿ: ಜೀವನ್ ನೆಡುಂಚೆಳಿಯನ್ ಮತ್ತು ಪುರವ್ ರಾಜಾ ಬದಲಿಗೆ ಎನ್.ಶ್ರೀರಾಮ್ ಬಾಲಾಜಿ ಅವರಿಗೆ ತಂಡದಲ್ಲಿ ಸ್ಥಾನ ನೀಡಿದ್ದನ್ನು ಭಾರತದ ಡೇವಿಸ್ ಕಪ್ ತಂಡದ ನಾಯಕ ಮಹೇಶ್ ಭೂಪತಿ ಸಮರ್ಥಿಸಿಕೊಂಡಿದ್ದಾರೆ.

ಸರ್ಬಿಯಾ ಎದುರಿನ ಡೇವಿಸ್ ಕಪ್ ಟೂರ್ನಿ ಇದೇ 14ರಿಂದ 16ರ ವರೆಗೆ ನಡೆಯಲಿದೆ. ಭುಜದಲ್ಲಿ ಗಾಯವಾಗಿರುವ ಕಾರಣ ಟೂರ್ನಿಯಿಂದ ದಿವಿಜ್ ಶರಣ್ ಅವರು ಹಿಂದೆ ಸರಿದಿದ್ದಾರೆ. ಅವರ ಬದಲಿಗೆ ಬಾಲಾಜಿಗೆ ಸ್ಥಾನ ನೀಡಲಾಗಿದೆ. ಯೂಕಿ ಭಾಂಬ್ರಿ ಜೊತೆ ಆಡಬೇಕಾಗಿದ್ದ ಸುಮಿತ್ ನಗಾಲ್ ಅವರು ಹಿಂದೆ ಸರಿದ ಕಾರಣ ಸಾಕೇತ್ ಮೈನೇನಿಗೆ ಸ್ಥಾನ ನೀಡಲಾಗಿದೆ.

‘ಸಮತೋಲನದ ತಂಡ ನಮಗೆ ಬೇಕಾಗಿದೆ. ಎಡಗೈ ಆಟಗಾರ ಪ್ರಜ್ಞೇಶ್ ಗುಣೇಶ್ವರ ತಂಡದಲ್ಲಿದ್ದಾರೆ. ಅವರೊಂದಿಗೆ ಸಮರ್ಥವಾಗಿ ಆಡಬಲ್ಲ ಮತ್ತೊಬ್ಬ ಆಟಗಾರನ ಅಗತ್ಯವಿತ್ತು. ಹೀಗಾಗಿ ಶ್ರೀರಾಮ್‌ಗೆ ಸ್ಥಾನ ನೀಡಲಾಗಿದೆ’ ಎಂದು ಭೂಪತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.