ಮಾಂಟೊ ಕಾರ್ಲೊ: ಆಸ್ಟ್ರೇಲಿಯಾದ ಅಲೆಕ್ಸ್ ಡಿ ಮಿನೌರ್ ಮೇಲೆ ಶುಕ್ರವಾರ ನೇರ ಸೆಟ್‌ಗಳಲ್ಲಿ ಗೆದ್ದ ನೊವಾಕ್ ಜೊಕೊವಿಚ್ ದಾಖಲೆಯ 77ನೇ ಮಾಸ್ಟರ್ಸ್ ಟೂರ್ನಿಯ ಸೆಮಿಫೈನಲ್ ತಲುಪಿದರು.

36 ವರ್ಷದ ಜೊಕೊವಿಚ್ ಕ್ವಾರ್ಟರ್‌ಫೈನಲ್‌ನಲ್ಲಿ 7–5, 6–4 ರಿಂದ ಅಲೆಕ್ಸ್ ಅವರನ್ನು ಸೋಲಿಸಿ 2015ರ ನಂತರ ಇಲ್ಲಿ ಮೊದಲ ಬಾರಿ ಅಂತಿಮ ನಾಲ್ಕರ ಹಂತ ತಲುಪಿದರು.

ಓಪನ್ ಯುಗದಲ್ಲಿ ಮಾಂಟೆ ಕಾರ್ಲೊ ಟೂರ್ನಿಯ ಸೆಮಿಫೈನಲ್ ತಲುಪಿದ ಅತಿ ಹಿರಿಯ ಆಟಗಾರ ಎನಿಸಿರುವ ಜೊಕೊವಿಚ್ ಸೆಮಿಫೈನಲ್‌ನಲ್ಲಿ ನಾರ್ವೆಯ ಕ್ಯಾಸ್ಪರ್ ರುಡ್ ಅಥವಾ ಫ್ರಾನ್ಸ್‌ನ ಉಗೊ ಹಂಬರ್ಟ್ ವಿರುದ್ಧ ಆಡಲಿದ್ದಾರೆ.

ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.

ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಯಾನಿಕ್ ಸಿನ್ನರ್ 6–4, 6–7 (6/8), 6–3 ರಿಂದ 2023ರ ರನ್ನರ್ ಅಪ್ ಹೋಲ್ಗರ್ ರುನ್ ಅವರನ್ನು ಸೋಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.