ಟೋಕಿಯೊ: ಜೆಕ್ ರಿಪಬ್ಲಿಕ್‌ನ ಕರೋಲಿನಾ ಪ್ಲಿಸ್ಕೋವಾ ಅವರು ಪ್ಯಾನ್ ಪೆಸಿಫಿಕ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಕರೋಲಿನಾ ಅವರು6–4, 6–4ರಿಂದ ಜಪಾನ್ ನವೋಮಿ ಒಸಾಕ ಅವರನ್ನು ಮಣಿಸಿದರು. ಇತ್ತೀಚೆಗೆ ನಡೆದ ಅಮೆರಿಕ ಓಪನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ನವೋಮಿ ಅವರು ಆಘಾತ ಅನುಭವಿಸಿದರು.

ಪಂದ್ಯದ ಆರಂಭದಲ್ಲಿ ನವೋಮಿ ಅವರು ಮುನ್ನಡೆ ಸಾಧಿಸಿದರು. ಆದರೆ, ಸೆಟ್ ಸಾಗಿದಂತೆಪ್ಲಿಸ್ಕೋವಾ ಅವರು ಆಟಕ್ಕೆ ಕುದುರಿಕೊಂಡರು. ಸಮಬಲ ಸಾಧಿಸಲು ಯಶಸ್ವಿಯಾದರು. ಈ ಹೊತ್ತಿನಲ್ಲಿ ಕರೋಲಿನಾ ಆಕರ್ಷಕ ವಿನ್ನರ್‌ಗಳನ್ನು ಸಿಡಿಸಿದರು.

ಮನಮೋಹಕ ಸರ್ವ್, ಬ್ಯಾಕ್‌ಹ್ಯಾಂಡ್, ಫೋರ್‌ಹ್ಯಾಂಡ್ ಹಾಗೂ ಬೇಸ್‌ಲೈನ್ ಹೊಡೆತಗಳು ಅವರ ಆಟಕ್ಕೆ ಮೆರುಗು ನೀಡಿದರು. ನವೋಮಿ ಅವರು ತಿರುಗೇಟು ನೀಡಲು ವಿಫಲರಾದರು. ಹೀಗಾಗಿ, ಜೆಕ್ ರಿಪಬ್ಲಿಕ್‌ನ ಆಟಗಾರ್ತಿ ಸೆಟ್ ತಮ್ಮದಾಗಿಸಿಕೊಂಡರು.

ಎರಡನೇ ಸೆಟ್‌ನ ಆರಂಭದಿಂದಲೂ ಉಭಯ ಆಟಗಾರ್ತಿಯರು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಹೀಗಾಗಿ ಸಮಬಲದತ್ತ ಸೆಟ್ ಸಾಗಿತು. ಈ ವೇಳೆ ನವೋಮಿ ಅವರು ಕೆಲ ತಪ್ಪುಗಳನ್ನು ಎಸಗಿ ಎದುರಾಳಿಗೆ ಪಾಯಿಂಟ್ಸ್ ಬಿಟ್ಟುಕೊಟ್ಟರು. ಎದುರಾಳಿಯ ವೈಫಲ್ಯಗಳನ್ನು ಸದುಪಯೋಗಪಡಿಸಿಕೊಂಡ ಕರೋಲಿನಾ ಅವರು ಸುಲಭವಾಗಿ ಸೆಟ್ ಗೆದ್ದು ಪಂದ್ಯ ತಮ್ಮದಾಗಿಸಿಕೊಂಡರು.

ಪ್ರಶಸ್ತಿ ಸಮಾರಂಭದ ವೇಳೆ ಮಾತನಾಡಿ ಕರೋಲಿನಾ, ‘ಉತ್ತಮ ಆಟಗಾರ್ತಿಯ ಎದುರು ಪಂದ್ಯ ಗೆದ್ದಿದ್ದು ಸಂತಸ ತಂದಿದೆ. ಎರಡು ಸೆಟ್‌ಗಳಿಗೆ ಪಂದ್ಯ ಕೊನೆಯಾಗಿದ್ದು ಒಳ್ಳೆಯದಾಯಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.