ನವದೆಹಲಿ: ಭಾರತದ ಪ್ರಜ್ಞೇಶ್ ಗುಣೇಶ್ವರನ್, ಸೋಮವಾರ ಬಿಡುಗಡೆಯಾಗಿರುವ ಎಟಿಪಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 94ನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ.

ಇದು ಪ್ರಜ್ಞೇಶ್ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ರಾಮಕುಮಾರ್ ರಾಮನಾಥನ್ 137ನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರು ಒಂಬತ್ತು ಸ್ಥಾನ ಕಳೆದುಕೊಂಡಿದ್ದಾರೆ. ಯೂಕಿ ಭಾಂಬ್ರಿ 171ನೇ ಸ್ಥಾನಕ್ಕೆ ಇಳಿದಿದ್ದಾರೆ.

ಸಾಕೇತ್ ಮೈನೇನಿ ಮತ್ತು ಶಶಿಕುಮಾರ್ ಮುಕುಂದ್ ಅವರು ಕ್ರಮವಾಗಿ 250 ಮತ್ತು 269ನೇ ಸ್ಥಾನಗಳಲ್ಲಿದ್ದಾರೆ.

ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಅವರು ಕ್ರಮವಾಗಿ 38 ಮತ್ತು 39ನೇ ಸ್ಥಾನಗಳನ್ನು ಕಾಪಾಡಿಕೊಂಡಿದ್ದಾರೆ.

ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಅಂಕಿತಾ ರೈನಾ 164ನೇ ಸ್ಥಾನದಲ್ಲಿದ್ದಾರೆ. ಕರ್ಮನ್‌ಕೌರ್ ಥಾಂಡಿ ಮತ್ತು ಪ್ರಾಂಜಲಾ ಯಡ್ಲಪಳ್ಳಿ ಅವರು ಕ್ರಮವಾಗಿ 207 ಮತ್ತು 293ನೇ ಸ್ಥಾನಗಳಲ್ಲಿ ಮುಂದುವರಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.