ನ್ಯೂಯಾರ್ಕ್: ಪ್ರತಿಷ್ಠಿತ ಅಮೆರಿಕ ಓಪನ್ ಮಹಿಳೆಯರ ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ಬ್ರಿಟನ್‌ನ 18 ವರ್ಷದ ಯುವ ತಾರೆ ಎಮ್ಮಾ ರಾಡುಕಾನು ನೂತನ ಇತಿಹಾಸ ರಚಿಸಿದ್ದಾರೆ.

ಈ ಮೂಲಕ ಟೆನಿಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ವಾಲಿಫೈಯರ್, ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ.

ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಮುಖಾಮುಖಿಯಲ್ಲಿ ಎಮ್ಮಾ ರಾಡುಕಾನು ಅವರು ಎದುರಾಳಿ ಕೆನಡಾದ ಲೇಲಾ ಫರ್ನಾಂಡೆಜ್ ವಿರುದ್ಧ 6-4, 6-3ರ ನೇರ ಅಂತರದಲ್ಲಿ ಗೆದ್ದು ಪ್ರಶಸ್ತಿಗೆ ಮುತ್ತಿಟ್ಟರು.

150ನೇ ರ‍್ಯಾಂಕ್ ಆಟಗಾರ್ತಿ ಎಮ್ಮಾ, ಟೂರ್ನಿಯಲ್ಲಿ ಒಂದೇ ಒಂದು ಸೆಟ್ ಬಿಟ್ಟುಕೊಡದೇ ಗ್ರ್ಯಾನ್ ಸ್ಲಾಮ್ ಕಿರೀಟ ಗೆಲ್ಲುವ ಮೂಲಕ ಅಚ್ಚರಿ ಮೂಡಿಸಿದರು.

1968ರ ಬಳಿಕ ಅಮೆರಿಕನ್ ಓಪನ್ ಗೆದ್ದ ಮೊದಲ ಬ್ರಿಟನ್ ಆಟಗಾರ್ತಿ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಹಾಗೆಯೇ 1977ರಲ್ಲಿ ವರ್ಜೀನಿಯಾ ವೇಡ್ ವಿಂಬಲ್ಡನ್ ಗೆದ್ದ ಬಳಿಕ ಸಿಂಗಲ್ಸ್ ಕಿರೀಟ ಗೆದ್ದ ಬ್ರಿಟನ್ ಆಟಗಾರ್ತಿ ಎನಿಸಿದ್ದಾರೆ.

ಶ್ರೇಯಾಂಕ ರಹಿತ ಆಟಗಾರ್ತಿಯರು ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು. ಅತ್ತ 19 ವರ್ಷದ ಲೇಲಾ ಫರ್ನಾಂಡೆಜ್, ಮಾಜಿ ಚಾಂಪಿಯನ್ ಜಪಾನ್‌ನ ನವೊಮಿ ಒಸಾಕ ಸೇರಿದಂತೆ ಪ್ರಮುಖ ಆಟಗಾರ್ತಿರನ್ನು ಪರಾಭವಗೊಳಿಸಿ ಫೈನಲ್‌ಗೆ ಪ್ರವೇಶಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.