ನ್ಯೂಯಾರ್ಕ್: ಅಮೆರಿಕ ಓಪನ್ ಟೆನಿಸ್ ಟೂರ್ನಿಯಿಂದ ಎಲಿನಾ ಸ್ವಿಟೋಲಿನಾ ಮತ್ತು ಕಿಕಿ ಬೆರ್ಟೆನ್ಸ್ ಹಿಂದೆ ಸರಿದಿದ್ದಾರೆ. ಈ ಮೂಲಕ ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿ ಆ್ಯಷ್ ಬಾರ್ಟಿ ಅವರ ಹಾದಿಯನ್ನು ಅನುಸರಿಸಿದ್ದಾರೆ. ಕೊರೊನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಐದನೇ ಕ್ರಮಾಂಕದ ಉಕ್ರೇನ್ ಆಟಗಾರ್ತಿ ಸ್ವಿಟೋಲಿನಾ ಅವರು ಹೋದ ವರ್ಷ ಅಮೆರಿಕ ಓಪನ್ ಟೂರ್ನಿಯಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿದ್ದರು. ಈ ಬಾರಿಯ ಟೂರ್ನಿಯಲ್ಲಿ ಆಡದಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದಿಕೊಂಡಿರುವ ಅವರು ‘ತಂಡ ಹಾಗೂ ಸ್ವತಃ ತನ್ನನ್ನು ಅಪಾಯಕ್ಕೆ ಒಡ್ಡಿಕೊಳ್ಳುವ ಅಮೆರಿಕ ಪ್ರಯಾಣ ಕ್ಷೇಮಕರವಲ್ಲ‘ ಎಂದಿದ್ದಾರೆ.

ವಿಶ್ವದ ಏಳನೇ ಕ್ರಮಾಂಕದ ಆಟಗಾರ್ತಿ ನೆದರ್ಲೆಂಡ್ಸ್‌ನ ಕಿಕಿ ಬೆರ್ಟೆನ್ಸ್ ಅವರು ತಾವು ಟೂರ್ನಿಯಿಂದ ಹಿಂದೆ ಸರಿಯುತ್ತಿರುವ ಕಾರಣವನ್ನು ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ’ಆಗಸ್ಟ್ 31ರಿಂದ ಸೆಪ್ಟೆಂಬರ್ 13ರವರೆಗೆ ನಡೆಯುವ ಅಮೆರಿಕ ಓಪನ್ ಟೂರ್ನಿಗೆ ಪ್ರೇಕ್ಷಕರು ಇಲ್ಲ. ಟೂರ್ನಿಯಲ್ಲಿ ಪಾಲ್ಗೊಂಡು ಮರಳಿದ ಬಳಿಕ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ‘ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

2016ರ ಫ್ರೆಂಚ್ ಓಪನ್ ಟೂರ್ನಿಯಲ್ಲಿ ಬೆರ್ಟೆನ್ಸ್ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದರು. ಈ ಬಾರಿಯ ಫ್ರೆಂಚ್ ಓಪನ್ ಟೂರ್ನಿ ಸೆಪ್ಟೆಂಬರ್ 27ರಿಂದ ನಿಗದಿಯಾಗಿದೆ.

ರಫೆಲ್ ನಡಾಲ್, ರೋಜರ್ ಫೆಡರರ್, ಸ್ಟ್ಯಾನ್ ವಾವ್ರಿಂಕಾ, ಫ್ಯಾಬಿಯೊ ಫಾಗ್ನಿನಿ, ಗೇಲ್ ಮೊನ್‌ಫಿಲ್ಸ್ ಕೂಡ ವಿವಿಧ ಕಾರಣಗಳಿಗಾಗಿ ಅಮೆರಿಕ ಓಪನ್ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.