ಪ್ಯಾರಿಸ್: ಅಮೆರಿಕ ಓಪನ್ನಲ್ಲಿ ಪ್ರಶಸ್ತಿ ಗೆದ್ದು ಟೆನಿಸ್ ಲೋಕದ ಗಮನ ಸೆಳೆದಿರುವ ಬಿಯಾಂಕಾ ಆ್ಯಂಡ್ರಿಸ್ಕೂ ಅವರು ಸೋಮವಾರ ಬಿಡುಗಡೆಯಾಗಿರುವ ಡಬ್ಲ್ಯುಟಿಎ ವಿಶ್ವ ರ್ಯಾಂಕಿಂಗ್ನಲ್ಲಿ ಐದನೇ ಸ್ಥಾನಕ್ಕೇರಿದ್ದಾರೆ.

ಕೆನಡಾದ 19 ವರ್ಷದ ಆಟಗಾರ್ತಿ ಬಿಯಾಂಕಾ, ಒಟ್ಟು ಹತ್ತು ಸ್ಥಾನ ಪ್ರಗತಿ ಕಂಡಿದ್ದಾರೆ. ಅವರ ಖಾತೆಯಲ್ಲಿ 4, 835 ಪಾಯಿಂಟ್ಸ್ ಇವೆ.

ಆಸ್ಟ್ರೇಲಿಯಾದ ಆ್ಯಷ್ಲೆ ಬಾರ್ಟಿ ಅಗ್ರಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ. ಅವರು ಜಪಾನ್ನ ನವೊಮಿ ಒಸಾಕ ಅವರನ್ನು ಹಿಂದಿಕ್ಕಿದ್ದಾರೆ.

ಅಮೆರಿಕ ಓಪನ್ನಲ್ಲಿ ಬಾರ್ಟಿ, ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಎಡವಿದ್ದರು. ಹೀಗಿದ್ದರೂ ಅವರು ಒಟ್ಟು ರ್ಯಾಂಕಿಂಗ್ ಪಾಯಿಂಟ್ಸ್ ಅನ್ನು 6,501ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ನವೊಮಿ ಒಸಾಕ, ಮೂರು ಸ್ಥಾನ ಕೆಳಗಿಳಿದಿದ್ದಾರೆ.

ಜೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ಮತ್ತು ಉಕ್ರೇನ್ನ ಎಲಿನಾ ಸ್ವಿಟೋಲಿನಾ ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಿಗೆ ಬಡ್ತಿ ಪಡೆದಿದ್ದಾರೆ.

ಅಮೆರಿಕ ಓಪನ್ನಲ್ಲಿ ರನ್ನರ್ಸ್ ಅಪ್ ಆಗಿದ್ದ ಸೆರೆನಾ ವಿಲಿಯಮ್ಸ್ ಒಂದು ಸ್ಥಾನ ಕಳೆದುಕೊಂಡಿದ್ದಾರೆ. ಎಂಟನೇ ಸ್ಥಾನದಲ್ಲಿದ್ದ ಅವರು ಒಂಬತ್ತಕ್ಕೆ ಇಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.