ಬೆಂಗಳೂರು: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ರೋಚಕ ಪಂದ್ಯಕ್ಕೂ ಮುನ್ನ ಭಾರತದ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಜಗತ್ತಿನ ವೇಗದ ಓಟಗಾರ ಜಮೈಕಾದ ಉಸೇನ್ ಬೋಲ್ಟ್ ಅವರು ಶುಭ ಹಾರೈಸಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯವನ್ನು ಕಾತರದಿಂದ ಎದುರು ನೋಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

'ಪುಮಾ ಡೈವ್' ಅಭಿಯಾನದಲ್ಲಿ ವಿರಾಟ್ ಕೊಹ್ಲಿ ಅವರು ಡೈವ್ ಹೊಡೆದು ಕ್ಯಾಚ್ ಹಿಡಿಯುವ ಚಿತ್ರಕ್ಕೆ ಬೋಲ್ಟ್ ಕಾಮೆಂಟ್ ಹಾಕಿದ್ದಾರೆ. ಪಿಚ್‌ನಲ್ಲಿ ನೀವು ವೇಗದ ಓಟಗಾರ. ಆದರೆ ಗಾಳಿಯಲ್ಲಿ ನಾನೇ ವೇಗದ ಓಟಗಾರ ಎಂದು ಡೈವ್ ಮಾಡಿದ ಚಿತ್ರವನ್ನು ಬೋಲ್ಟ್ ಹಂಚಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ವಿರಾಟ್, ಉಸೈನ್ ಪಾಜಿ, ನೀವು ಪಂದ್ಯ ವೀಕ್ಷಿಸುವುದಾದರೆ ಹೆಚ್ಚುವರಿ 100 ಮೀ. ಸ್ಪ್ರಿಂಟ್‌ನೊಂದಿಗೆ ತಯಾರಾಗುತ್ತೇನೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.