ಭುವನೇಶ್ವರ: ಲೋಕಸಭಾ ಚುನಾವಣೆಯ ದಿನಾಂಕ ಪ್ರಕಟಗೊಂಡ ನಂತರವಷ್ಟೇ ಐಪಿಎಲ್ ಏಳನೇ ಆವೃತ್ತಿಯ ಸ್ಥಳ ನಿಗದಿ ಮಾಡಲಾಗುವುದು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿದೆ.

ಶುಕ್ರವಾರ ಇಲ್ಲಿ ನಡೆದ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಏಪ್ರಿಲ್ 9ರಿಂದ ಜೂನ್ ಮೂರರವರೆಗೆ ಐಪಿಎಲ್ ನಡೆಯಲಿದೆ.
‘ಚುನಾವಣಾ ದಿನಾಂಕ ಪ್ರಕಟವಾಗುವುದನ್ನು ಎದುರು ನೋಡುತ್ತಿದ್ದೇವೆ. ನಂತರ ಐಪಿಎಲ್ ಏಳನೇ ಆವೃತ್ತಿ ಎಲ್ಲಿ ಆಯೋಜಿಸಬೇಕು ಎನ್ನುವು ದನ್ನು ತೀರ್ಮಾನಿಸುತ್ತೇವೆ. ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರಗಳು ಐಪಿಎಲ್ ಆಯೋಜಿ ಸಲು ಉತ್ಸುಕವಾಗಿವೆ. ಅದರಲ್ಲೂ ದಕ್ಷಿಣ ಆಫ್ರಿಕಾ ಮುಂಚೂಣಿಯಲ್ಲಿದೆ’ ಎಂದು ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ತಿಳಿಸಿದರು. ದಕ್ಷಿಣ ಆಫ್ರಿಕಾ ದಲ್ಲಿ ಉತ್ತಮ ಕ್ರೀಡಾಂಗಣಗಳಿವೆ. ಜೊತೆಗೆ, ಭಾರತದ ವೀಕ್ಷಕರಿಗೆ ಅನುಕೂಲವಾಗುವ ರೀತಿಯಲ್ಲಿ ಸಮಯ ಹೊಂದಾಣಿಕೆಯಾಗುತ್ತದೆ.

ಪಾರದರ್ಶಕ ಟೂರ್ನಿ: ‘ಈ ಬಾರಿಯ ಐಪಿಎಲ್ ಪಂದ್ಯಗಳನ್ನು ಪಾರದರ್ಶಕವಾಗಿ ನಡೆಸಲು ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ. ಫಿಕ್ಸಿಂಗ್ನಿಂದ ಆಗುವ ಪರಿಣಾಮಗಳ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಿದ್ದೇವೆ. ಈ ಬಗ್ಗೆ ಆಟಗಾರರು ಮತ್ತು ಫ್ರಾಂಚೈಸ್ಗಳಿಗೆ ಶಿಕ್ಷಣ ನೀಡಲಾಗಿದೆ’ ಎಂದು ಐಪಿಎಲ್ ಚೇರ್ಮನ್ ರಂಜಿಬ್ ಬಿಸ್ವಾಲ್ ನುಡಿದಿದ್ದಾರೆ.
‘ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ತಂಡ ಕ್ರೀಡಾಂಗಣಗಳಿಗೆ ತೆರಳಿ ಪ್ರತಿ ಪಂದ್ಯ ವೀಕ್ಷಿಸಲಿದೆ. ಜೊತೆಗೆ ಮೋಸದಾಟ ಹಾಗೂ ಫಿಕ್ಸಿಂಗ್ ತಡೆ ಯಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾ ಗುತ್ತದೆ’ ಎಂದು ಅವರು ಭರವಸೆ ನೀಡಿದರು.

ಆದಾಯ ಹೆಚ್ಚಿಸುವ ಗುರಿ:(ಪಿಟಿಐ/ ಐಎಎನ್ ಎಸ್ ವರದಿ) 2015ರಿಂದ 2023ರ ಅವಧಿ ಯಲ್ಲಿ ಬಿಸಿಸಿಐ ತನ್ನ ಆದಾಯವನ್ನು ಅಂದಾಜು ₨ 3700 ಕೋಟಿಗೆ ಹೆಚ್ಚಿಸುವ ಗುರಿ ಹೊಂದಿದೆ. ಅಕಾಡೆಮಿ ಸ್ಥಾಪಿಸಲು ತೀರ್ಮಾನ: ಅಂಪೈರ್ಗಳ ಗುಣಮಟ್ಟ ಸುಧಾರಿಸುವ ಸಲುವಾಗಿ ಅಂಪೈರ್ ಅಕಾಡೆಮಿಯನ್ನು ಸ್ಥಾಪಿಸಲು ಬಿಸಿಸಿಐ ಅಂಪೈರ್ ಗಳ ಉಪಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.

‘ಅಂಪೈರ್ಗಳ ಗುಣಮಟ್ಟ ಹೆಚ್ಚಿಸಲು ಈ ನಿರ್ಧಾರಕ್ಕೆ ಬಂದಿದ್ದೇವೆ. ವಲಯವಾರು ಅಕಾಡೆಮಿಗಳನ್ನು ಸ್ಥಾಪಿಸಲಾಗುತ್ತದೆ. ಅಂಪೈರ್ಗಳಿಗೆ ಪರೀಕ್ಷೆಗಳನ್ನು ಆಯೋಜಿಸುವುದು. ತರಬೇತಿ ನೀಡುವುದು ಅಕಾಡೆಮಿಯ ಉದ್ದೇಶ. ಐಸಿಸಿ ಎಲೈಟ್ ಸಮಿತಿಯಲ್ಲಿ ಈಗ ಯಾರೂ ಭಾರತೀಯ ಅಂಪೈರ್ಗಳಿಲ್ಲ. ಮುಂದೆಯೂ ಈ ಕೊರತೆ ಕಾಡಬಾರದು ಎನ್ನುವ ಕಾರಣಕ್ಕಾಗಿ ಅಕಾಡೆಮಿ ಸ್ಥಾಪಿಸುವ ನಿರ್ಧಾರಕ್ಕೆ ಬರಲಾಗಿದೆ’ ಎಂದು ಬಿಸಿಸಿಐ ಖಚಾಂಚಿ ರವಿ ಸಾವಂತ್ ಸಭೆಯ ನಂತರ ಮಾಧ್ಯಮದವರಿಗೆ ಮಾಹಿತಿ ನೀಡಿದರು.
2004ರಲ್ಲಿ ಶ್ರೀನಿವಾಸ ವೆಂಟಕರಾಘವನ್ ನಿವೃತ್ತಿಯಾದ ನಂತರ ಭಾರತದ ಯಾವ ಅಂಪೈ ರ್ ಕೂಡಾ ಐಸಿಸಿ ಸಮಿತಿಯಲ್ಲಿ ಕಾಣಿಸಿಕೊಂಡಿಲ್ಲ.
ಪ್ರದರ್ಶನ ಪ್ರಶ್ನಿಸಿದ ಪಾಂಡೊವೆ

ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನೆಲದಲ್ಲಿ ತೋರಿದ ಕಳಪೆ ಪ್ರದರ್ಶನದ ಬಗ್ಗೆ ಬಿಸಿಸಿಐ ಮಾಜಿ ಖಚಾಂಚಿ ಸಭೆಯಲ್ಲಿ ಪ್ರಶ್ನಿಸಿದರು.
‘ಎಲ್ಲರೂ ಐಪಿಎಲ್ ಬಗ್ಗೆಯೇ ಮಾತನಾಡುತ್ತಿ ದ್ದೀರಿ. ಭಾರತ ವಿದೇಶಿ ನೆಲದಲ್ಲಿ ಸತತ ಸರಣಿ ಸೋಲು ಅನುಭವಿಸಿದೆ. ಈ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ’ ಎಂದು ಪಂಜಾಬ್ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿಯೂ ಆದ ಪಾಂಡೊವೆ ಅಸಮಾಧಾನ ಹೊರಹಾಕಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀನಿವಾಸನ್ ‘ಸರಣಿ ಸೋಲಿನ ಬಗ್ಗೆ ತಂಡದ ಸಹಾಯಕ ಸಿಬ್ಬಂದಿ ಮತ್ತು ಕೋಚ್ ಡಂಕನ್ ಫ್ಲೆಚರ್ ಅವರೊಂದಿಗೆ ಚರ್ಚೆ ನಡೆಸಲಾಗುತ್ತದೆ. ಐಸಿಸಿ ಟ್ವೆಂಟಿ–20 ವಿಶ್ವಕಪ್ ವೇಳೆಗೆ ಬಲಿಷ್ಠ ತಂಡವನ್ನು ಕಟ್ಟುತ್ತೇವೆ’ ಎಂದು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.